ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಈ ವಾರ ಆಚೆ ಬರಲಿದ್ದಾರೆ. ಆ ಮೂಲಕ ಅರ್ಧ ಸೀಸನ್ನಲ್ಲೇ ಆಟ ಮುಗಿಸಿ ಮನೆಗೆ ಹೋಗಲಿದ್ದಾರೆ.

ಈ ವಾರ ಎಂಟು ಮಂದಿ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದರು. ಈ ಪೈಕಿ ಕ್ಯಾಪ್ಟನ್ ರಘು ಕೂಡ ನಾಮಿನೇಟ್ ಲಿಸ್ಟ್ನಲ್ಲಿದ್ದಾರೆ.

ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಅವರು ಈ ವಾರ ಆಡಿದ ಆಟದ ಬಗ್ಗೆ ಮಾತನಾಡಿದ್ದಾರೆ. ರಕ್ಷಿತಾ ಅವರು ಕಿಚ್ಚ ಸುದೀಪ್ ಅವರಿಗೇ ಎದುರು ಮಾತನಾಡಿದ್ದು, ‘ಬಾದ್ ಷಾ’ ಗರಂ ಆಗುವಂತೆ ಮಾಡಿದೆ.
ಇನ್ನೊಂದು ಕಡೆ ಧ್ರುವಂತ್ ಅವರು ರಾಶಿಕಾ ಅವರ ಬಗ್ಗೆ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿ ಸುದೀಪ್ ಅವರು ಮಾತನಾಡಿದ್ದಾರೆ.
ಧ್ರುವಂತ್ ಅವರು ಆ ರೀತಿಯ ಅರ್ಥದಲ್ಲಿ ಮಾತನಾಡಿಲ್ಲವೆಂದು ಹೇಳಿಕೆಗೆ ಸಮರ್ಥನೆ ನೀಡಲು ಯತ್ನಿಸಿದ್ದಾರೆ. ಆದರೆ ಅವರ ಹೇಳಿಕೆಗೆ ಅವರು ಸಮರ್ಥನೆ ನೀಡಲು ಸಾಧ್ಯವಾಗಿಲ್ಲ.
ಧ್ರುವಂತ್, ರಾಶಿಕಾ ಸರಿ ತಪ್ಪು ಎನ್ನುವುದು ಇಲ್ಲಿ ಮುಖ್ಯವಲ್ಲ. ಈ ವೇದಿಕೆಯನ್ನು ಯಾರೂ ಕೂಡ ಹಾಳು ಮಾಡಬೇಡಿ ಎಂದು ಗರಂ ಆಗಿಯೇ ಹೇಳಿದ್ದಾರೆ.
ಈ ನಡುವೆ ಎಂಟು ಮಂದಿಯಲ್ಲಿ ಒಬ್ಬರು ಮನೆಯಿಂದ ಆಚೆ ಬರಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪ್ರಕಾರ ಒಬ್ಬ ಪುರುಷ ಸ್ಪರ್ಧಿ ಈ ವಾರ ಆಚೆ ಬರಲಿದ್ದಾರೆ.
ಅಶ್ವಿನಿ ಗೌಡ, ಜಾನ್ವಿ, ಧ್ರುವಂತ್, ರಕ್ಷಿತಾ, ಕಾಕ್ರೋಚ್ ಸುಧಿ, ರಿಷಾ, ರಾಶಿಕಾ, ರಘು ಅವರು ನಾಮಿನೇಟ್ ಆಗಿದ್ದಾರೆ.
ಇವರ ಪೈಕಿ ಒಬ್ಬ ಧ್ರುವಂತ್ ಅವರು ಮನೆಯಿಂದ ಆಚೆ ಹೋಗಲಿದ್ದಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಶುರುವಾಗಿದೆ.
ಧ್ರುವಂತ್ ದೊಡ್ಮಿನೆಯಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಆರಂಭದಲ್ಲಿ ಮಲ್ಲಮ್ಮ ಜತೆ ಆತ್ಮೀಯವಾಗಿದ್ದರು. ಆ ಬಳಿಕ ಒಂಟಿಯಾಗಿಯೇ ಹೆಚ್ಚಾಗಿ ಇದ್ದರು. ಇದೇ ವಾರ ರಕ್ಷಿತಾ, ಗಿಲ್ಲಿ ಅವರ ಮೇಲೆ ಗರಂ ಆಗಿದ್ದರು.
ನಾಮಿನೇಟ್ ವಿಚಾರದಲ್ಲಿ ಆಕ್ರೋಶಗೊಂಡು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.




