ಪುತ್ತೂರು : ಡಾಕ್ಟರ್ ಜಿಎಂ ಪಾಟೀಲ್ ಕಾನೂನು ಮಹಾವಿದ್ಯಾಲಯ ಧಾರವಾಡ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಜರುಗಿದ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯಗಳ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಸ್ಪರ್ಧೆಯು ಡಾಕ್ಟರ್ ಜಿಎಂ ಪಾಟೀಲ್ ಕಾನೂನು ಮಹಾವಿದ್ಯಾಲಯ ಧಾರವಾಡದಲ್ಲಿ ಜರುಗಿತು.

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ದಕ ಇದರ ಕ್ರಾಸ್ ಕಂಟ್ರಿ ತಂಡವು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ಬಂಗಾರದ ಪದಕವನ್ನು ಸತತ ಆರನೇ ವರ್ಷ ತಮ್ಮದಾಗಿಸಿಕೊಂಡಿದೆ. ಪುರುಷರ ಕ್ರೀಡಾ ತಂಡದಲ್ಲಿ
ದ್ವಿತೀಯ ಬಿ ಎ ಎಲ್ ಎಲ್ ಬಿ ನ ಅನುದೀಪ್, ತೃತೀಯ ಬಿಎಎಲ್ಎಲ್ಬಿ ನ ಸುಶಾಂತ್ ಕೆ, ಎ ಶ್ರೀತೇಜ್ ಶೆಟ್ಟಿ, ಚತುರ್ಥ ಬಿ ಏ ಎಲ್ ಎಲ್ ಬಿ ದಿಂದ ಲಿಖಿತ್ ಪ್ರಸಾದ್ ಪಿ ಮತ್ತು ಅಶ್ವಿತ್ ಕುಮಾರ್, ಅಂತಿಮ ಬಿಎಎಲ್ಬಿಯಿಂದ ವಿಜಯ್ ಶ್ರೀ ಹರಿ ಪಿ ಎಂ ಇವರು ಭಾಗವಹಿಸಿದ್ದರು.
ಮಹಿಳೆಯರ ಕ್ರೀಡಾ ತಂಡದಲ್ಲಿ ಪ್ರಥಮ ಬಿಎಎಲ್ಬಿ ಇಂದ ರಶ್ಮಿತ ಆರ್ ಕುಂದರ್, ರಕ್ಷಿತ ವಿ ಶೆಟ್ಟಿ, ತೃತಿಯ ಬಿಎಎಲ್ಎಬಿ ಇಂದ ಪ್ರಣಮ್ಯ ಪಕಳ ಮತ್ತು ಆಕೃತಿ ಕೆ, ಅಂತಿಮ ಬಿ ಎಎಲ್ ಎಲ್ ಬಿ ಇಂದ ಯಶ್ವಿತ ಮತ್ತು ವೃಂದ ಭಾಗವಹಿಸಿದ್ದರು.
ವಿಜಯ್ ಶ್ರೀ ಹರಿ ವೈಯಕ್ತಿಕವಾಗಿ ದ್ವಿತೀಯ ಸ್ಥಾನ
ಅನುದೀಪ್ ಎನ್ 5ನೇ ಸ್ಥಾನ ಯಶ್ವಿತ 6ನೇ ಪಡೆದಿರುತ್ತಾರೆ.




