ಪ್ರವೇಶಕ್ಕೆ ನಿರ್ಬಂಧ ಇರುವ ಜಾಗದಲ್ಲಿ ಮೀನಿಗೆ ಗಾಳ..; 8 ಮಂದಿಯ ವಿರುದ್ಧ ಕೇಸು ದಾಖಲು

Share with

ಮಲ್ಪೆ: ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಇರುವ ಮಲ್ಪೆ ಬಂದರು ವ್ಯಾಪ್ತಿಯ ದರಿಯಾ ಬಹದ್ದೂರ್ ದ್ವೀಪ (ಬಾದ್ರಗಡ)ಕ್ಕೆ ಗಾಳ ಹಾಕಿ ಮೀನು ಹಿಡಿಯಲು ಹೋದ 8 ಮಂದಿಯ ಮೇಲೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೊಹಮ್ಮದ್ ಹುಸೈನ್, ರೋಶನ್ ಜಮೀರ್, ಮಹಮ್ಮದ್ ಅನ್ಸರ್ ಬಶೀರ್, ಅಬು ಸನಾನ್, ಅಣ್ಣಪ್ಪ ಮಂಜುನಾಥ ದೇವಾಡಿಗ, ಮಹಮ್ಮದ್ ಫೈಜಾನ್‌ ಶೇಖ್ ಹಾಗೂ ಜಾವೇದ್ ಅಹಮದ್ ಅವರು ಆರೋಪಿಗಳು.

ನ. 14ರಂದು ಶೇಖರ ಕುಂದರ್ ಮಾಲಕತ್ವದ ಬೋಟಿನಲ್ಲಿ ಸಂಜೆ 4 ಗಂಟೆಗೆ ತೆರಳಿ 5-30ಕ್ಕೆ ವಾಪಾಸು ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ದ್ವೀಪಕ್ಕೆ ಅತಿಕ್ರಮ ಪ್ರವೇಶ ಮಾಡಿರುವ ಕುರಿತು ಮಲ್ಪೆ ಬಂದರು ಉಪ ಸಂರಕ್ಷಣಾಧಿಕಾರಿ ಅಂತೋನಿ ಫೆಲಿಕ್ಸ್ ಅವರು ದೂರಿನಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *