ಕಾರು–ಸ್ಕೂಟರ್ ಮಧ್ಯೆ ಅಪಘಾತ; ಇಬ್ಬರಿಗೆ ಗಾಯ

Share with

ಉಡುಪಿ: ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಕೊರಂಗ್ರಪಾಡಿ ಉಡುಪಿ ರಸ್ತೆಯಲ್ಲಿ ಸಂಭವಿಸಿದೆ.

ಪ್ರವೀಣ್‌ ಎಂಬವರು ತನ್ನ ಕಾರನ್ನು ಚರ್ಚ್ ಕಡೆಯಿಂದ ಮಿಷನ್ ಕಾಂಪೌಂಡ್ ಕಡೆಗೆ ವೇಗದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಹೋಗುತ್ತಿದ್ದ ವಿರಾಜ್ ಶೆಟ್ಟಿಗಾ‌ರ್ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಸಿದರು. ಸ್ಕೂಟ‌ರ್ ಸವಾರ ಹಾಗೂ ಸಹಸವಾರ ರಕ್ಷತ್ ಅವರಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *