ಕಾಸರಗೋಡು ಮೂಲದ ಸಿನಿಮಾ ನಿರ್ದೇಶಕನ ಪುತ್ರ ಆತ್ಮಹತ್ಯೆ..!

Share with

ಕಾಸರಗೋಡು : ಸಿನಿಮಾ ನಿರ್ದೇಶಕ ಹಾಗೂ ಚೆನ್ನೈಯಲ್ಲಿ ಪತ್ರಕರ್ತನಾಗಿರುವ ಕಾಸರಗೋಡು ಮೂಲದ ಪ್ರಶಾಂತ್ ಕಾನತ್ತೂ‌ರ್ ಅವರ ಪುತ್ರ ಅನಿರುದ್ ಯಾನೆ ಕಣ್ಣನ್ (22) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಕಂಪ್ಯೂಟರ್ ಗೇಮ್ ಡಿಸೈನಿಂಗ್ ನಲ್ಲಿ ವಿಶೇಷ ಪರಿಣತಿ ಹೊಂದಿದ್ದ ಕಣ್ಣನ್, ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಗೇಮ್ಸ್ ಡಿಸೈನರ್ ಆಗಿ ವೃತ್ತಿಗೆ ಇತ್ತೀಚೆಗಷ್ಟೇ ಸೇರಿಕೊಂಡಿದ್ದ. ಕಳೆದೆರಡು ದಿನಗಳಿಂದ ಉದ್ಯೋಗಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಬಾಡಿಗೆ ಮನೆ ಗೆ ಬಂದು ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.


Share with

Leave a Reply

Your email address will not be published. Required fields are marked *