ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ | ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

Share with

ಕಾಸರಗೋಡು: ಮಂಗಳೂರು – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್ ಶುಲ್ಕ ವಸೂಲು ವಿರುದ್ಧ ಹೋರಾಟ ಸಮಿತಿ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ.19ಕ್ಕೆ ಮುಂದೂಡಲಾಗಿದೆ.

ನ.12 ರಿಂದ ಶುಲ್ಕ ವಸೂಲಿಗೆ ಗುತ್ತಿಗೆ ಕಂಪೆನಿ ತೀರ್ಮಾನಿಸಿತ್ತು. ಈ ನಡುವೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಶುಲ್ಕ ವಸೂಲಿ ಮುಂದೂಡಲಾಗಿತ್ತು. ಟೋಲ್ ವಸೂಲಿಯನ್ನು ಹೈಕೋರ್ಟ್ ತೀರ್ಪು ಬರುವ ತನಕ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿತ್ತು.


Share with

Leave a Reply

Your email address will not be published. Required fields are marked *