ವ್ಹೀಲಿಂಗ್ ಮಾಡಿದ ಅಪ್ರಾಪ್ತ.. ಪೋಷಕರಿಗೆ ಬಿತ್ತು ₹25,000 ಫೈನ್..!

Share with

ಅಪ್ರಾಪ್ತರ ಕೈಯಲ್ಲಿ ಬೈಕ್ ಕೊಡುವ ಪೋಷಕರಿಗೆ ನ್ಯಾಯಾಲಯ ಬಿಸಿಮುಟ್ಟಿಸಿದೆ. ನ್ಯಾಯಾಲಯ ₹25,000 ದಂಡ ವಿಧಿಸಿದೆ. 17 ವರ್ಷದ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿ ಬೆಂಗಳೂರು ರಾಜಾಜಿನಗರ ಬಳಿ ಅಪಾಯಕಾರಿ ವ್ಹೀಲಿಂಗ್ ಮಾಡಿದ ವಿಡಿಯೋ ವೈರಲ್ ಆಗಿತ್ತು.

ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಜಾಗರೂಕ ಚಾಲನೆ, ಪೋಷಕರ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ ಬೆಂಗಳೂರಿನ JMFC ಸಂಚಾರ ನ್ಯಾಯಾಲಯ-4 ಸ್ಕೂಟರ್ ಮಾಲೀಕರಿಗೆ ದಂಡ ವಿಧಿಸಿದೆ.


Share with

Leave a Reply

Your email address will not be published. Required fields are marked *