ಖಾಸಗಿ ಬಸ್ ಕಾರ್ಮಿಕರ ಮಧ್ಯೆ ಮಾರಾಮಾರಿ..! ಚಾಲಕನಿಗೆ ಗಾಯ

Share with

ಕುಂಬಳೆ: ಬಸ್‌ಗಳ ಸಂಚಾರ ಸಮಯದ ವಿವಾದದಲ್ಲಿ ಕುಂಬಳೆ ಬಸ್ ತಂಗುದಾಣದಲ್ಲಿ ಖಾಸಗಿ ಬಸ್ ಕಾರ್ಮಿಕರ ಮಧ್ಯೆ ಮಾರಾಮಾರಿ ನಡೆದಿದ್ದು, ಈ ಸಂದರ್ಭದಲ್ಲಿ ಬಸ್‌ ಚಾಲಕನೋರ್ವ ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಕಾಸರಗೋಡು ತಲಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸೆಂದರ ಚಾಲಕ ನೀರ್ಚಾಲು ಕನ್ಯಪ್ಪಾಡಿಯ ಅಮೀರ್ ಎನ್(30) ಗಾಯಗೊಂಡಿದ್ದಾರೆ. ಗಾಯಾಳು ನೀಡಿದ ದೂರಿನಂತೆ ಇದೇ ರೂಟ್‌ನಲ್ಲಿ ಸಂಚರಿಸುವ ಎರಡು ಖಾಸಗಿ ಬಸ್‌ಗಳ ಕಾರ್ಮಿಕರಾದ ಸಹದ್‌, ನಿಶಾದ್, ಬಾದಿಶಾ ಹಾಗು ಅಮೀನ್ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಪೊಲೀಸ್ ನಿಗಾ ಆದೇಶ : ಬಸ್ ಸಂಚಾರದ ಸಮಯದ ಹೆಸರಿನಲ್ಲಿ ಖಾಸಗಿ

ಕಾರ್ಮಿಕರ ಮಧ್ಯೆ ಪದೇ ಪದೇ ಘರ್ಷಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಂಬಳೆ, ಬದಿಯಡ್ಕ ಮತ್ತು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳ ಎಲ್ಲಾ ಖಾಸಗಿ ಬಸ್‌ಗಳ ಸೇವಾ ಸಮಯಾವಳಿಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಮೂರು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶ ನೀಡಿದ್ದಾರೆ. ಇಂತಹ ಘರ್ಷಣೆ ನಡೆದರೆ ಬಿಗಿ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶ ನೀಡಿದ್ದಾರೆ.


Share with

Leave a Reply

Your email address will not be published. Required fields are marked *