ಇಂದು ಈ ವರ್ಷದ ಕೊನೆಯ ಸೂಪರ್ ಮೂನ್

Share with

ಉಡುಪಿ: ಚಂದ್ರ, ಭೂಮಿ ಸುತ್ತುವ ತನ್ನ ದೀರ್ಘ ವೃತ್ತದ ಪೆರಜಿ, ಸಮೀಪದ ದೂರ ಸುಮಾರು 3,57,200 ಕಿಮೀ ಬರಲಿದೆ.

ಸರಾಸರಿ ದೂರ 3,84,400 ಕಿಮೀ ದೂರಕ್ಕಿಂತ 27 ಸಾವಿರ ಕಿ,ಮೀ, ಭೂಮಿಗೆ ಸಮೀಪ ಬರುವುದರಿಂದ ಹುಣ್ಣಿಮೆಯ ಚಂದ್ರ ಮಾಮೂಲಿಗಿಂತ ಸುಮಾರು 14 ಅಂಶ ದೊಡ್ಡದಾಗಿ ಕಂಡು ಚಂದ್ರಪ್ರಭೆ ಸುಮಾರು 24 ಅಂಶ ಹೆಚ್ಚಿರುತ್ತದೆ. ಈ ರೀತಿ ಡಿ.

4ರಂದು ಸೂಪರ್‌ಮೂನ್ ಕಂಡುಬರಲಿದೆ. ಇದು ಈ ವರ್ಷದ ಕೊನೆಯ ಸೂಪರ್ ಮೂನ್ ಎಂದು ಉಡುಪಿಯ ಖಗೋಳಶಾಸ್ತ್ರಜ್ಞ ಡಾ| ಎ.ಪಿ. ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *