ಅನಸ್ತೇಶಿಯಾ ನೀಡಿ 6 ತಿಂಗಳಿನಿಂದ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವಕ ಸಾವು

Share with

ಕಾಸರಗೋಡು: ಆರು ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆಗಾಗಿ ಅನಸ್ತೇಶಿಯಾ ಚುಚ್ಚುಮದ್ದು ನೀಡಿದ ಬಳಿಕ ಅರೆ ಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಸಾವಿಗೀಡಾದ ಘಟನೆ ನಡೆದಿದೆ.

ಮಂಗಳೂರು ವಿಮಾನ ಅಪಘಾತದಲ್ಲಿ ಸಾವಿಗೀಡಾದ ಉದುಮ ಕುಂಡಡ್ಕದ ಮಾಹಿನ್ ಅವರ ಪುತ್ರ ಅಲ್ತಾಫ್(31) ಸಾವಿಗೀಡಾದರು. ಆರು ತಿಂಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದರು. ಅನಂತರ ಅಪೆಂಡಿಸೈಟಿಸ್ ಬಾಧಿಸಿದ ಹಿನ್ನೆಲೆಯಲ್ಲಿ ಅಲ್ತಾಫ್ ಕಾಸರಗೋಡು ಪರಿಸರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ತಲುಪಿದ್ದರು. ಶಸ್ತ್ರ ಚಿಕಿತ್ಸೆಯ ಪೂರ್ವಭಾವಿಯಾಗಿ ಅವರಿಗೆ ಅನಸ್ತೇಶಿಯ ಚುಚ್ಚುಮದ್ದು ನೀಡಲಾಗಿತ್ತು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ತಾಫ್ ಅವರಿಗೆ ಪ್ರಜ್ಞೆ ಬಾರದೆ ಆರು ತಿಂಗಳ ಬಳಿಕ ಸಾವಿಗೀಡಾದರು.


Share with

Leave a Reply

Your email address will not be published. Required fields are marked *