6ನೇ ವಯಸ್ಸಿನಲ್ಲಿ ಪ್ರಾಥಮಿಕ ಶಿಕ್ಷಣ, 12ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ, 15ನೇ ವಯಸ್ಸಿನಲ್ಲಿ ಪಿಹೆಚ್ಡಿ ಮಾಡಿದ ಬಾಲಕ

Share with

ಸಾಧನೆ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ. ಯಾವ ವಯಸ್ಸಿನಲ್ಲೂ ಬೇಕಾದರೂ ಸಾಧನೆಯನ್ನು (Laurent Simons) ಮಾಡಬಹುದು. ಇದೀಗ ಬೆಲ್ಜಿಯಂನ ಪುಟ್ಟ ಬಾಲಕನೊಬ್ಬ ಚಿಕ್ಕ ವಯಸ್ಸಿನಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾನೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಬಾಲಕನನ್ನು ಬೆಲ್ಜಿಯಂನ ಪುಟ್ಟ ಐನ್‌ಸ್ಟೈನ್ ಎಂದು ಕರೆಯಲಾಗುತ್ತದೆ. 15 ವರ್ಷದ ಲಾರೆಂಟ್ ಸೈಮನ್ಸ್, ಬೆಲ್ಜಿಯಂನ ಆಂಟ್ವೆರ್ಪ್ ವಿಶ್ವವಿದ್ಯಾಲಯದಲ್ಲಿ ಕ್ವಾಂಟಮ್ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾನೆ. ಫ್ಲೆಮಿಶ್ (ಬೆಲ್ಜಿಯಂ) ಪ್ರಸಾರಕ ವಿಟಿಎಂ ವರದಿ ಪ್ರಕಾರ ಲಾರೆಂಟ್ ಕಳೆದ ವಾರ ತನ್ನ ಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದ್ದಾನೆ. ಇದೀಗ ಈ ಪ್ರಬಂಧ ಆತನಿಗೆ ಡಾಕ್ಟರೇಟ್ ಪದವಿ ದೊರೆಯುವಂತೆ ಮಾಡಿದೆ.

ಲಾರೆಂಟ್ ತನ್ನ ಪ್ರಾಥಮಿಕ ಶಿಕ್ಷಣವನ್ನು ನಾಲ್ಕನೇ ವಯಸ್ಸಿನಲ್ಲಿ ಪ್ರಾರಂಭಿಸಿ, ಆರನೇ ವಯಸ್ಸಿನಲ್ಲಿ ಮುಗಿಸಿದ್ದಾನೆ. 12 ನೇ ವಯಸ್ಸಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾನೆ. ಬೋಸಾನ್‌ಗಳು ಮತ್ತು ಕಪ್ಪು ಕುಳಿಗಳಂತಹ ವಿಷಯಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ವೈಜ್ಞಾನಿಕ ವಿಚಾರಗಳ ಹಾಗೂ ಅದರ ಬಗ್ಗೆ ಆಸಕ್ತಿಯನ್ನು ಹೊಂದಿರುವ ಈ ಬಾಲಕ, ಲಾರೆಂಟ್ ಛಾಯಾಗ್ರಹಣದ ಸ್ಮರಣೆ ಮತ್ತು 145 ಐಕ್ಯೂ (Intelligence Quotient) ಹೊಂದಿದ್ದಾನೆ ಎಂದು ವರದಿಗಳು ಹೇಳುತ್ತವೆ. ಅವನ ಹೆತ್ತವರು ಚಿಕ್ಕ ವಯಸ್ಸಿನಲ್ಲಿಯೇ ಲಾರೆಂಟ್ ಆಸಕ್ತಿಯನ್ನು ಹಾಗೂ ಸಾಮರ್ಥ್ಯವನ್ನು ಗುರುತಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಲಾರೆಂಟ್ ” 11 ನೇ ವಯಸ್ಸಿನಲ್ಲಿ, ತನ್ನ ಅಜ್ಜ-ಅಜ್ಜಿಯನ್ನು ಕಳೆದುಕೊಂಡ ನಂತರ, ಮಾನವ ಜೀವಿತಾವಧಿಯನ್ನು ವಿಸ್ತರಿಸುವ ಕೆಲಸ ಮಾಡಲು ಬಯಸುತ್ತೇನೆ. ಈ ಗುರಿ ತನಗಾಗಿ ಅಲ್ಲ, ಬದಲಾಗಿ ಇತರರಿಗಾಗಿ, ಜನರು ದೀರ್ಘಕಾಲ ಮತ್ತು ಆರೋಗ್ಯಕರವಾಗಿ ಬದುಕಲು ಸಹಾಯ ಮಾಡಲು ಭವಿಷ್ಯದಲ್ಲಿ ವೈದ್ಯಕೀಯ ವಿಜ್ಞಾನವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಇದನ್ನು ಮಾಡುತ್ತಿದ್ದೇನೆ” ಎಂದು ಹೇಳಿದ್ದಾನೆ.

ಇನ್ನು ಲಾರೆಂಟ್ ಈ ಸಾಧನೆಯನ್ನು ಮಾಡಿದ ಮೊದಲು ಬಾಲಕ ಅಲ್ಲ. ಈ ಹಿಂದೆ ಅಂದರೆ 1814ರಲ್ಲಿ ಜರ್ಮನ್ ಪ್ರತಿಭೆ ಕಾರ್ಲ್ ವಿಟ್ಟೆ ಎಂಬ ಬಾಲಕ 13ನೇ ವಯಸ್ಸಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದ, ಈ ಸಾಧನೆ ಗಿನ್ನೆಸ್ ವಿಶ್ವ ದಾಖಲೆಗಳು ಪಟ್ಟಿಗೆ ಸೇರಿತ್ತು. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನ ಕಾರ್ಸನ್ ಹುಯೆ-ಯು ಎಂಬುವವರು 21 ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದರು. ಎರಡು ವರ್ಷ ವಯಸ್ಸಿನಿಂದಲೇ ಪುಸ್ತಕ ಓದಲು ಶುರು ಮಾಡಿದ್ದರು. ಲಾರೆಂಟ್ ಈಗ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ . ಇದೀಗ ಹಲವು ಐಟಿ ಕಂಪನಿಗಳ ಗಮನವನ್ನು ಸೆಳೆಯುತ್ತಿದ್ದಾನೆ.


Share with

Leave a Reply

Your email address will not be published. Required fields are marked *