ಖ್ಯಾತ ಸ್ತ್ರೀ ರೋಗ ತಜ್ಞೆ ಮತ್ತು ಪುತ್ರ ನೇಣಿಗೆ ಶರಣು..!

Share with

ಶಿವಮೊಗ್ಗ: ಶಿವಮೊಗ್ಗದ ಖ್ಯಾತ ಸ್ತ್ರೀ ರೋಗ ತಜ್ಞೆ ಮತ್ತು ಅವರ ಪುತ್ರ ಅಶ್ವಥನಗರದ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶುಕ್ರವಾರ (ಡಿ.05) ಪತ್ತೆಯಾಗಿದ್ದಾರೆ.

ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್ (34) ಮೃತಪಟ್ಟವರು. ಮನೆಯ ಕೆಳಭಾಗದಲ್ಲಿ ಡಾ. ಜಯಶ್ರೀ ಅವರು ನೇಣು ಬಿಗಿದುಕೊಂಡಿದ್ದರೆ, ಮೊದಲ ಮಹಡಿಯಲ್ಲಿ ಅಕಾಶ್ ನೇಣಿಗೆ ಶರಣಾಗಿದ್ದಾರೆ.

ಒಂದೂವರೆ ವರ್ಷದ ಹಿಂದೆ ಆಕಾಶ್ ಅವರ ಪತ್ನಿ ನವ್ಯಶ್ರೀ ಇದೇ ಮನೆಯ ಕೆಳಭಾಗದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದರಿಂದ ಆಕಾಶ್ ಮತ್ತು ಡಾ. ಜಯಶ್ರೀ ತೀವ್ರ ಆಘಾತಕ್ಕೊಳಗಾಗಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಆಕಾಶ್‌ಗೆ ಮತ್ತೊಂದು ಮದುವೆಯಾಗಿತ್ತು ಎಂದು ತಿಳಿದು ಬಂದಿದೆ. ವಿನೋಬ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ


Share with

Leave a Reply

Your email address will not be published. Required fields are marked *