ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ, ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಆಗಿದೆ. ಹಾವೇರಿಯ ಮಹಿಳೆಗೆ ನಿನ್ನೆ ಡಿ. 2ಕ್ಕೆ ಖಾತೆಯಲ್ಲಿ ಜಮಾ ಆಗಿದೆ ಹಾಗೆಯೇ ರಾಯಚೂರಿನ ಓರ್ವ ಮಹಿಳೆಗೆ ಕಳೆದ ತಿಂಗಳು ನ. 26ರ ಬೆಳಗಿನ ಜಾವ 6:30ಕ್ಕೆ ಹಣ ಜಮಾ ಆಗಿದೆ ಎಂಬ ಸಂದೇಶ ಬಂದಿದೆ.

ಜೊತೆಗೆ, ರಾಮನಗರದ ಜಿಲ್ಲೆಯ ಹಾರೋಹಳ್ಳಿ, ಧಾರವಾಡ ಜಿಲ್ಲೆ, & ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲೂ 23ನೇ ಕಂತು ಸ್ವೀಕರಿಸಲಾಗಿದೆ ಎಂದು ಫಲಾನುಭವಿಗಳು ಖಚಿತಪಡಿಸಿದ್ದಾರೆ.




