ಬೆಂಗಳೂರು: ಬಿಗ್ ಬಾಸ್ ಮನೆಯ ವೀಕೆಂಡ್ ಎಪಿಸೋಡ್ನಲ್ಲಿ ಇಂದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಕಿಚ್ಚ ಸುದೀಪ್ (Kiccha Sudeep) ಸ್ಪರ್ಧಿಗಳಲ್ಲಿರುವ ವೈಯಕ್ತಿಕ ಅಭಿಪ್ರಾಯವನ್ನು ಕೇಳಲಿದ್ದಾರೆ.

ಇವತ್ತು ಬಿಗ್ ಬಾಸ್ ಮನೆಯಿಂದ ಒಬ್ಬರು ಹೊರಬರಲಿದ್ದಾರೆ. ಒಂಬತ್ತು ಮಂದಿಯಲ್ಲಿ ಒಬ್ಬರು ಆಟದ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಹೋಗಲಿದ್ದಾರೆ.
ಎಲಿಮಿನೇಷನ್ ಮುನ್ನ ಸುದೀಪ್ ಅವರು ದೊಡ್ಡನೆಯಲ್ಲಿ ಸ್ಪರ್ಧಿಗಳೊಂದಿಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾರು ಯಾರ ಆಟಕ್ಕೆ ಯಾರು ಹಾವು – ಏಣಿ ಆಗುತ್ತಿದ್ದಾರೆ ಎಂದು ಕಿಚ್ಚ ಅವರು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ರಘು, ಅಶ್ವಿನಿ ಹಾಗೂ ಕಾವ್ಯ ಅವರು ಗಿಲ್ಲಿಯ ಹೆಸರನ್ನು ಹೇಳಿದ್ದಾರೆ.
“ಗಿಲ್ಲಿ ಈ ಮನೆಯಲ್ಲಿ ಹಾವು ಆಗಿದ್ದಾರೆ. ಬಂದಾಗಿನಿಂದ ನನ್ನ ವ್ಯಕ್ತಿತ್ವವನ್ನು ಚೇಂಜ್ ಮಾಡೋಕೆ ಅವನು ನೋಡುತ್ತಿದ್ದೇನೆ” ಎಂದು ರಘು ಕಾರಣವನ್ನು ಕೊಟ್ಟಿದ್ದಾರೆ.
“ಇಲ್ಲಿ ಮನಸ್ಸುಗಳನ್ನು ನಿರಂತರವಾಗಿ ಹೊಡೆಯುತ್ತಿರುವ ಕೆಲಸವನ್ನು ಮಾಡುತ್ತಿರುವುದು ಗಿಲ್ಲಿ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಇನ್ನು ಗಿಲ್ಲಿ ಆಪ್ತ ಸ್ನೇಹಿತೆಯಾಗಿರುವ ಕಾವ್ಯ ಅವರೇ ಗಿಲ್ಲಿ ವಿರುದ್ದ ತಿರುಗಿ ಬಿದ್ದಿದ್ದು, ಗಿಲ್ಲಿ ಅವರನ್ನೇ ಹಾವು ಎಂದು ಕರೆದಿದ್ದಾರೆ. “ನನ್ನನ್ನು ಕಾವು ಅಂತ ರೇಗಿಸುತ್ತಾನೆ. ಅದು ಬೇರೆ ಅವರ ಕಣ್ಣಿಗೆ ಬೇರೆ ರೀತಿ ಕಾಣಿಸುತ್ತದೆ. ನನಗೆ ನೋವು ಆಗುತ್ತದೆ ಅಂತ ಹೇಳಿದ್ರೂ ಅವನು ಅರ್ಥ ಮಾಡಿಕೊಂಡು ಸ್ಟಾಪ್ ಮಾಡುತ್ತಾನೆ ಅಂತ ಅನ್ನೊಂಡಿದ್ದೆ” ಎಂದು ಕಾವ್ಯ ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಗಿಲ್ಲಿ ಅವರು ನನ್ನ ಪಯಣಕ್ಕೆ ಕಾವ್ಯ ಏಣಿಯಾಗಿದ್ದಾರೆ ಎಂದು ಕಾವ್ಯನಿಗೆ ಏಣಿ ಎಂದು ಹೇಳಿದ್ದಾರೆ. ಇನ್ನು ರಘು ಅವರು ಮಾಳುಗೆ ಏಣಿ ಎಂದು ಕರೆದಿದ್ದಾರೆ.




