ತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ಅವರು ಡಿ.7 ಸಂಕಷ್ಟಹರ ಚತುರ್ಥಿಯಂದು ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ಗುರುತಿಸಿ ಸಮ್ಮಾನಿಸಲಾಯಿತು.

ದೇಗುಲದ ಚರಿತ್ರೆಯ ಪುಸ್ತಕ: ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ದೇವಳ ಕಾಷ್ಠಶಿಲ್ಪಿ ವೈಭವ ಹಾಗೂ ಪುರಾಣಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿರುವ ಅವರಿಗೆ ದೇಗುಲದ ಪುರಾಣವನ್ನು ಸಾರುವ ಚರಿತ್ರೆಯ ಪುಸ್ತಕವನ್ನು ದೇವಳದ ಅಡಳಿತ ಮಂಡಳಿಯವರು ನೀಡಿದರು.
ಅಭಿಮಾನಿಗಳ ಹರ್ಷ: ದೇಗುಲದ ದರ್ಶನ ಮುಗಿಸಿ ಹೊರ ಬರುತ್ತಿದ್ದಂತೆ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಜೈ ಶ್ರೀರಾಮ ಎಂಬ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ.ನಿರಂಜನ ಉಪಾಧ್ಯಾಯ, ಕೆ.ಪದ್ಮನಾಭ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ.ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್ ತೆಕ್ಕಟ್ಟೆ, ಅರ್ಚಕ ಮಂಡಳಿಯ ಸದಸ್ಯರು, ಬಿಜೆಪಿ ಕಾರ್ಯಕರ್ತರು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.




