ತಿರುವನಂತಪುರಂ ರಾಧಾಕೃಷ್ಣನ್ ಗೆ ಭಾರೀ ಬೇಡಿಕೆ: ಮನೆಗೆ ಬಂದ ಸಚಿವ!

Share with

ಐತಿಹಾಸಿಕ ಸಾಧನೆಗೈದ ಬಿಜೆಪಿಗೆ ಒಂದು ಸ್ಥಾನದ ಅಗತ್ಯ… ಇನ್ನಷ್ಟೇ ನಿರ್ಧರಿಸಬೇಕು ಎಂದ ಪಕ್ಷೇತರ ಸದಸ್ಯ!

ತಿರುವನಂತಪುರಂ: ಕೇರಳದ ರಾಜಧಾನಿಯ ಮಹಾನಗರಪಾಲಿಕೆಯಲ್ಲಿ 45 ವರ್ಷಗಳ ನಿರಂತರ ಎಡಪಂಥೀಯ ಆಡಳಿತವನ್ನು ಕೊನೆಗೊಳಿಸುವ ಮೂಲಕ, ಬಿಜೆಪಿ ಐತಿಹಾಸಿಕ ರಾಜಕೀಯ ಪ್ರಗತಿಯನ್ನು ಸಾಧಿಸಿದೆ. ಸದ್ಯ ಬಿಜೆಪಿಗೆ ಸಂಪೂರ್ಣ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದ್ದು ಓರ್ವ ಪಕ್ಷೇತರ ಸದಸ್ಯನನ್ನು ಸೆಳೆಯುವ ಅನಿವಾರ್ಯತೆ ಎದುರಾಗಿದೆ.

101 ವಾರ್ಡ್‌ಗಳ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 50 ವಾರ್ಡ್‌ಗಳನ್ನು ಗೆದ್ದು ಭಾರಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಪಿ. ವಿಜಯನ್ ನೇತೃತ್ವದ ಆಡಳಿತಾರೂಢ ಎಡ ರಂಗ (LDF) 29 ವಾರ್ಡ್‌ಗಳನ್ನು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) 19 ವಾರ್ಡ್‌ಗಳನ್ನು ಗೆದ್ದಿದೆ.

ಕನ್ನಮೂಲ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಪತ್ತೂರು ರಾಧಾಕೃಷ್ಣನ್ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ತಿರುವನಂತಪುರಂ ಪ್ರೆಸ್ ಕ್ಲಬ್‌ನ ಮಾಜಿ ಕಾರ್ಯದರ್ಶಿಯಾಗಿದ್ದ,ರಾಧಾಕೃಷ್ಣನ್ ಮೂವರು ಮುಂಚೂಣಿಯ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ 373 ಮತಗಳ ಅಂತರದಿಂದ ಗೆದ್ದಿದ್ದಾರೆ.

ಪ್ರಸ್ತುತ ತಿರುವನಂತಪುರದಲ್ಲಿ ಹೆಚ್ಚು ಚರ್ಚೆಯಲ್ಲಿರುವ ಹೆಸರು ಅವರದ್ದಾಗಿದೆ.

ಇಬ್ಬರು ಪಕ್ಷೇತರು ಜಯ ಸಾಧಿಸಿದ್ದು

ನಿರ್ಣಾಯಕ ವಿಷಯವೆಂದರೆ ಯಾವ ನಿರ್ಧಾರ ತಳೆಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಪಟ್ಟೂರು ರಾಧಾಕೃಷ್ಣನ್ 1215 ಮತ, ಎಲ್‌ಡಿಎಫ್ ಅಭ್ಯರ್ಥಿ 842 ಮತ, ಯುಡಿಎಫ್ ಅಭ್ಯರ್ಥಿ 702 ಮತ ಮತ್ತು ಬಿಜೆಪಿ 514 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯೂ ರಾಧಾಕೃಷ್ಣನ್ ಅವರನ್ನು ಮನವೊಲಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದೆ.

ರಾಧಾಕೃಷ್ಣನ್ ಮಾತನಾಡಿ “ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲು ಬಯಸಿದ್ದು, ಸ್ಥಳೀಯರೊಂದಿಗೆ ಸಮಾಲೋಚಿಸಿದ ನಂತರ ಯಾವ ರಂಗದೊಂದಿಗೆ ಸಹಕರಿಸಬೇಕೆಂದು ನಿರ್ಧರಿಸುತ್ತೇನೆ. ಬೆಂಬಲ ಕೋರಿ ಅನೇಕರು ತಮ್ಮನ್ನು ಆಹ್ವಾನಿಸುತ್ತಿದ್ದಾರೆ. ಇನ್ನೂ ಅಂತಿಮ ನಿಲುವು ತೆಗೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಸಿಪಿಎಂ ಕೂಡ ಬಿಜೆಪಿಯ ಪ್ರಯತ್ನಕ್ಕೆ ಅಡ್ಡಿಯಾಗಲು ಪ್ರಯತ್ನ ಆರಂಭಿಸಿದೆ.ಇದರ ಭಾಗವಾಗಿ, ಸಚಿವ ವಿ. ಶಿವನ್‌ಕುಟ್ಟಿ ಪಟ್ಟೂರ್ ರವಿವಾರ ಬೆಳಗ್ಗೆ ರಾಧಾಕೃಷ್ಣನ್ ಅವರ ಮನೆಗೆ ಭೇಟಿ ನೀಡಿದ್ದಾರೆ.

ಇನ್ನೊಂದೆಡೆ ಪೌಂಡುಕಡವು ವಾರ್ಡ್‌ಲ್ಲಿ ಬಂಡಾಯ ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಧೀಶ್ ಕುಮಾರ್ ಗೆಲುವು ಸಾಧಿಸಿದ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. ಯುಡಿಎಫ್ ಸೀಟು ಹಂಚಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಂಡಾಯವಾಗಿ ಕಣಕ್ಕಿಳಿದಿದ್ದರು. ಬಿಜೆಪಿ ಅವರನ್ನೂ ಸೆಳೆಯಲು ಯತ್ನ ನಡೆಸಿದೆ.


Share with

Leave a Reply

Your email address will not be published. Required fields are marked *