ಕಣ್ಣೀರಿಟ್ಟು ಮನೆಯಿಂದ ಆಚೆ ನಡೆದ ರಕ್ಷಿತಾ–ಧ್ರುವಂತ್..! ಇರುತ್ತಾ ಟ್ವಿಸ್ಟ್..?

Share with

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲಿಮಿನೇಷನ್‌ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ಇರಲಿದೆ. ಒಬ್ಬರಲ್ಲ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾರು ಹೆಚ್ಚು ಪಾಪಗಳನ್ನು ಮಾಡಿದ್ದಾರೆ. ಯಾರ ಪಾಪದ ಕೊಡ ತುಂಬಿದೆ ಎಂದು ಸುದೀಪ್ ಹೇಳಿದ್ದಾರೆ. ಅದರಂತೆ ಒಬ್ಬೊಬ್ಬರು ಬಂದು ಇವರ ಪಾಪದ ಕೊಡ ತುಂಬಿದೆ ಎಂದು ಹೇಳಿದ್ದಾರೆ.

ಗಿಲ್ಲಿ ಅವರು ರಜತ್ ಅವರ ಹೆಸರನ್ನು ಹೇಳಿದ್ದಾರೆ. “ರಜತ್ ಅಣ್ಣ ಮಾತು ಮಾತಿಗೂ ಎಲ್ಲರಿಗೂ ಟಾಸ್ಕ್ ಬುಕ್ ಅರ್ಥ ಆಗಿಲ್ಲ” ಎನ್ನುತ್ತಾರೆ ಎಂದಿದ್ದಾರೆ.

ಗಿಲ್ಲಿಯನ್ನು ನಾನು ಲೆಕಕ್ಕೆ ತೆಗೆದುಕೊಂಡಿಲ್ಲ. ಗಿಲ್ಲಿ ಟಾಸ್ಕ್ ಆಡೋದೇ ಇಲ್ಲ ಎಂದು ರಜತ್ ಹೇಳಿದ್ದಾರೆ.

ನಾನು ಹತ್ತು ಟಾಸ್ಕ್ ಆಡಿದ್ರೆ, ಎಂಟು ಟಾಸ್ಕ್ ಅಲ್ಲಿ ಗೆದ್ದಿದ್ದೀನಿ. ರಜತ್ ಅವರು ಮೊದಲ ಟಾಸ್ಕ್‌ನಲ್ಲೇ ಹೊರಗೆ ಕೂತುಕೊಂಡಿದ್ದಾರೆ ಎಂದಿದ್ದಾರೆ.

ಇದನ್ನು ಕೇಳಿದ ರಜತ್, ನಾನು ಒಬ್ಬನೇ ಬಂದಿದ್ದೇನೆ. ಒಬ್ಬನೇ ಇವರನ್ನೆಲ್ಲ ಮನೆಯಿಂದ ಆಚೆ ಹಾಕ್ತಿನಿ ಎಂದಿದ್ದಾರೆ. ಇದಕ್ಕೆ ಗಿಲ್ಲಿ ಅವರು ನಾನು ಕೂಡ ಇವರನ್ನು ಆಚೆ ಕಳುಹಿಸಿಯೇ ಆಚೆ ಹೋಗೋದು ಎಂದಿದ್ದಾರೆ.

ಇನ್ನೊಂದು ಕಡೆ ನಾಮಿನೇಷನ್ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಈ ವಾರ ಸರ್ಪ್ರೈಸ್ ಎಲಿಮಿನೇಷನ್ ಇದೆ ಈ ವಾರ ಇಬ್ಬರು ಹೋಗಲಿದ್ದಾರೆ ಎಂದಿದ್ದಾರೆ.

ರಜತ್, ಧ್ರುವಂತ್ ಹಾಗೂ ರಕ್ಷಿತಾ ಅವರು ಡೇಂಜರ್ ಝನ್‌ನಲ್ಲಿದ್ದಾರೆ. ಇವರ ಪೈಕಿ ರಜತ್ ಅವರನ್ನು ಸೇಫ್ ಮಾಡಲಾಗಿದೆ.

ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ. ರಕ್ಷಿತಾ ಕಣ್ಣೀರಿಡುತ್ತಾ, “ನಾನು ಸತ್ಯವಾಗಲೂ ಹೋಗ್ತಾ ಇದ್ದೇನೆ. ಮತ್ತೆ ಬರೋಕೆ ಆಗಲ್ಲ” ಎಂದಿದ್ದಾರೆ.

ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್, ರಕ್ಷಿತಾ?:

ಮೂಲಗಳ ಪ್ರಕಾರ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎನ್ನಲಾಗಿದೆ. ಧ್ರುವಂತ್ ಹಾಗೂ ರಕ್ಷಿತಾ ಅವರದು ಫೇಕ್ ಎಲಿಮಿನೇಷನ್ ಎನ್ನಲಾಗಿದೆ. ಇವರಿಬ್ಬರನ್ನು ಸೀಕ್ರೆಟ್ ರೂಮ್‌ನಲ್ಲಿಡಲಾಗುತ್ತದೆ. ಸೀಕ್ರೆಟ್ ರೂಮ್‌ನಲ್ಲಿ ಕೆಲ ಸಮಯ ಇರಿಸಿ ಆ ಬಳಿಕ ಮನೆಗೆ ಕರೆಸಲಾಗುತ್ತದೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *