ಶಿಶಿಲ: ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಭೂಮಿಯ ಸರ್ವೇ ನಡೆಸಿದ ಅರಣ್ಯ ಇಲಾಖೆ: ಗ್ರಾಮಸ್ಥರಿಂದ ಆಕ್ಷೇಪ

Share with

ಶಿಶಿಲ: ಕಳೆಂಜದ ಸರ್ವೇ ನಂಬರ್ 309ರ ಸರ್ವೇ ಕಾರ್ಯ ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದು ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸರ್ವೇ ಅಧಿಕಾರಿಗಳು ಅಲ್ಲಿನ ಪಟ್ಟ ಜಮೀನುಗಳನ್ನು ತಮ್ಮದೆಂದು ಸರ್ವೇ ನಡೆಸಿದ್ದು ಅಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇದರಿಂದ ಬೇಸತ್ತ ಅಲ್ಲಿನ ನಿವಾಸಿಗಳು ಉಪ್ಪಿನಂಗಡಿ ಉಪವಲಯಾರಣ್ಯಧಿಕಾರಿಗೆ ದೂರು ನೀಡಿದ್ದು ದೂರಿನ ಪತ್ರದಲ್ಲಿ ಶಿಶಿಲ ಗ್ರಾಮದ ಹೊಳೆಗಂಡಿ, ದೇನೋಡಿ ಭಾಗದಲ್ಲಿ ಅಲ್ಲಿನ 80ಕುಟುಂಬಗಳಿಗೆ 1966ರಲ್ಲಿ ಅಕ್ರಮ ಸಕ್ರಮದ ಅಡಿಯಲ್ಲಿ ಜಮೀನು ಮಂಜೂರಾಗಿದ್ದು ಅದು ಅರಣ್ಯದಿಂದ ಕಂದಾಯಕ್ಕೆ ವಿಂಗಡಣೆಯಾಗಿರುತ್ತದೆ. ಆದ್ದರಿಂದ ಸರಕಾರವು ಮಂಜೂರು ಮಾಡಿರುವ ಭೂಮಿಯನ್ನು ಹೊರತುಪಡಿಸಿ ತಮ್ಮ ಅರಣ್ಯ ಭಾಗವನ್ನು ಮಾತ್ರ ಸರ್ವೇ ಮಾಡಬೇಕೆಂಬುದು ನಮ್ಮ ಮನವಿ ಸರಕಾರದಿಂದ ದೇನೋಡಿ ಭಾಗದಲ್ಲಿ ಮಂಜೂರಾಗಿರುವ ಜಮೀನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಪ್ರವೇಶ ಮಾಡಿ ಸರ್ವೇ ಮಾಡಿದ್ದು ಆ ಸರ್ವೇ ಕೂಡ ಅಸಮರ್ಪಕವಾಗಿದೆ.

ಇನ್ನೂ ಮುಂದಿನ ದಿನಗಳಲ್ಲಿ ಶಿಶಿಲ ಭಾಗದಲ್ಲಿ ಸರಕಾರದಿಂದ ಮಂಜೂರು ಗೊಂಡಿರುವ ಜಾಗವನ್ನು ಯಾವುದೇ ರೀತಿ ಸರ್ವೇ ನಡೆಸದಂತೆ ಆಕ್ಷೇಪಣೆ ಇರುತ್ತದೆ ಎಂದು ಉಪವಲಯಾರಣ್ಯಧಿಕಾರಿಗೆ ನೀಡಿರುವ ಪತ್ರದಲ್ಲಿ ಶಿಶಿಲ ಗ್ರಾಮಸ್ಥರ ಉಲ್ಲೇಖಿಸಿದ್ದಾರೆ.


Share with

Leave a Reply

Your email address will not be published. Required fields are marked *