ಜನ ವಸತಿ ಪ್ರದೇಶದಲ್ಲಿ ಚಿರತೆ ಶವ ಪತ್ತೆ..!

Share with

ಕಾಸರಗೋಡು : ಕಾಞಂಗಾಡ್ ಸಮೀಪದ ಕಲ್ದಾರ್ ಕೊಟ್ಟಕುನ್ನು ಎಂಬಲ್ಲಿ ಜನ ವಸತಿ ಇರುವ ಪ್ರದೇಶದಲ್ಲಿ ಚಿರತೆಯ ಶವ ಪತ್ತೆಯಾಗಿದ್ದು ಜನತೆಯನ್ನು ಆತಂಕಕ್ಕೀಡಾಗಿದೆ. ಶಾಜಿ ಅವರ ಹೊಲದಲ್ಲಿ ಚಿರತೆಯ ಶವ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಚಿರತೆ ಹಿಂಡು ನಾಡಿಗಿಳಿದಿವೆಯೇ ಎಂದು ಜನ ಭೀತಿ ಪಡುವಂತಾಗಿದೆ.

ಈ ಬಗ್ಗೆ ಮಾಹಿತಿ ಅರಿತ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಿದೆ. ಕಣ್ಣೂರಿನಿಂದ ಪಶುವೈದ್ಯರು ಬಂದು ಶವವನ್ನು ಪರೀಕ್ಷಿಸಿದ ನಂತರವೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ಮೃತದೇಹವನ್ನು ವೀಕ್ಷಿಸಲು ಸಮೀಪ ಪ್ರದೇಶವಾಸಿಗಳು ಆಗಮಿಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *