ಶಿಶಿಲದಲ್ಲಿ ಮುಂದುವರೆದ ಕಾಡಾನೆ ಉಪಟಳ..!ಗಾಯಗೊಂಡ ಆನೆ ಇರುವ ಶಂಕೆ ವ್ಯಕ್ತ ಪಡಿಸಿದ ಸ್ಥಳೀಯರು..!!

Share with

ಶಿಶಿಲ: ಕಳೆದ ಹಲವಾರು ದಿನಗಳಿಂದ ಕಾಡಾನೆಗಳ ತಂಡ ಇಲ್ಲಿನ ಮಲೆ ಕುಡಿಯ ಕಾಲೋನಿಯಯಲ್ಲಿ ಬೀಡು ಬಿಟ್ಟಿದ್ದು ಸುತ್ತಮುತ್ತಲಿನ ತೋಟಗಳಿಗೆ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಸಹಿತ ಇನ್ನೂ ಹಲವಾರು ಉಪಬೆಳೆಗಳನ್ನು ನಾಶ ಪಡಿಸಿದೆ.

ಡಿ. 15ರಂದು ರಾತ್ರಿ ಆನೆಗಳು ತೋಟಕ್ಕೆ ನುಗ್ಗಿದ್ದು ಆನೆಯ ಹೆಜ್ಜೆ ಗುರುತು ಇರುವ ಕಡೆ ರಕ್ತ ಮತ್ತು ಹುಳಗಳು ಪತ್ತೆಯಾಗಿದ್ದು ಇದರಿಂದ ಆನೆಯೊಂದಕ್ಕೆ ಗಾಯವಾಗಿರುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಡಿ. 16ರಂದು ಮುಂಜಾನೆ ಅರಣ್ಯ ಗಸ್ತು ಪಾಲಕ ಸಚಿನ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಳಗಿನ ಹೊತ್ತಲ್ಲಿ ಗಾಯಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಲು ಸಾಧ್ಯವಿಲ್ಲದ ಕಾರಣ ರಾತ್ರಿ ಹೊತ್ತಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *