ಭಾರತದ ಕಬಡ್ಡಿ ತಂಡದಲ್ಲಿ ಆಡಿದ ಪಾಕಿಸ್ತಾನ ಆಟಗಾರ..!

Share with

ಶಿಸ್ತು ಕ್ರಮಕ್ಕೆ ಮುಂದಾದ ಪಾಕ್ ಕಬಡ್ಡಿ ಫೆಡರೇಶನ್

ಇಸ್ಲಾಮಾಬಾದ್: ಬಹ್ರನ್ ನಲ್ಲಿ ನಡೆದ ಖಾಸಗಿ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ವಿರುದ್ಧ ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಡಿಸೆಂಬರ್ 16ರಂದು ಬಕ್ರೇನ್ ನಲ್ಲಿ ನಡೆದ GCC Cup ಖಾಸಗಿ ಟೂರ್ನಿಯಲ್ಲಿ ಉಬೈದುಲ್ಲಾ ಭಾರತೀಯ ಶರ್ಟ್ ಧರಿಸಿ ಭಾರತದ ಧ್ವಜ ಬೀಸುತ್ತಿರುವ ವೀಡಿಯೊಗಳು ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ವಿಚಾರ ಫೆಡರೇಶನ್ ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *