ಶಾಲಾ ಬಸ್ ಗೆ ಸರಕಾರಿ ಬಸ್ ಡಿಕ್ಕಿ..; ಹಲವರಿಗೆ ಗಾಯ

Share with

ಸಾಗರ: ತಾಲೂಕಿನ ಇಡುವಾಣಿ ಸಮೀಪ ಸರ್ಕಾರಿ ಬಸ್ ಮತ್ತು ಶಾಲಾ ವಾಹನದ ನಡುವೆ ಡಿಕ್ಕಿ ಸಂಭವಿಸಿ ಹಲವರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಗುರುವಾರ ನಡೆದಿದೆ.

ಜೋಗ್ ಕಾರ್ಗಲ್ ಭಾಗದಿಂದ ಸಾಗರದ ಎಲ್‌ಬಿ ಕಾಲೇಜು ಹಾಗೂ ಪ್ರಗತಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಶಾಲಾ ವಾಹನ ಹಾಗೂ ಸಾಗರದಿಂದ ಕಾರ್ಗಲ್ ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

ಶಾಲಾ ಬಸ್‌ನಲ್ಲಿ 32 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು ಎನ್ನಲಾಗಿದೆ. ಈ ಪೈಕಿ 9ನೇ ತರಗತಿ ವಿದ್ಯಾರ್ಥಿ ಸಾತ್ವಿಕ್, ಶಾಲಾ ಬಸ್ ಚಾಲಕ ಪ್ರವೀಣ್, ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಆರೀಫ್ ಎಂಬುವವರಿಗೆ ಹೆಚ್ಚಿನ ಹೊಡೆತ ಬಿದ್ದಿದ್ದು ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ಗಾಯಗೊಂಡವರಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆಯಂತೆ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ನೆರವಾದರು.


Share with

Leave a Reply

Your email address will not be published. Required fields are marked *