ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್

Share with

ಶ್ರೀನಗರ, ಜನವರಿ 2: ಕಾಶ್ಮೀರದ ಶ್ರೀ ನಗರ ಬಾರಾಮುಲ್ಲಾ ಉರಿ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಭಾರಿ ಭೂಕುಸಿತ (Landslide) ಸಂಭವಿಸಿದೆ. ಈ ಭಯಾನಕ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೈವೇಗೆ ದೊಡ್ಡ ಪರ್ವತದ ಅರ್ಧ ಭಾಗ ಉರುಳಿಬಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ವಾಹನ ಸವಾರರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರು.

ಸದ್ಯಕ್ಕೆ ಯಾವುದೇ ಸಾವುಗಳು ಸಂಭವಿಸಿಲ್ಲ. ಈ ಘಟನೆಯಿಂದ ಜನಪ್ರಿಯ ಪ್ರವಾಸಿ ಕೇಂದ್ರಗಳಾದ ಗುಲ್ಮಾರ್ಗ್, ಪಹಲ್ಗಾಮ್ ಮತ್ತು ಸೋನಾಮಾರ್ಗ್ ಸೇರಿದಂತೆ ಎತ್ತರದ ಪ್ರದೇಶಗಳತ್ತ ಸಾಗುತ್ತಿದ್ದ ಪ್ರವಾಸಿಗರು ಮುಂದೆ ಹೋಗಲು ಸಾಧ್ಯವಾಗಲಿಲ್ಲ.


Share with

Leave a Reply

Your email address will not be published. Required fields are marked *