ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದ ‘ಕಾಂತಾರ: ಚಾಪ್ಟರ್ 1’ ಸಿನಿಮಾ

Share with

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದಿದೆ. ಇದು ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ಸಿನಿಮಾ ಅಲ್ಲ. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ಸಿನಿಮಾ ರೇಸ್ಗೆ ಪ್ರವೇಶ ಪಡೆದುಕೊಂಡಿದೆ. ‘ಅತ್ಯುತ್ತಮ ಚಿತ್ರ’ ರೇಸ್ನಲ್ಲಿ ರಿಷಬ್ ನಿರ್ದೇಶನದ ಚಿತ್ರ ಇದೆ ಎಂಬುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಹಾಲಿವುಡ್ ಸಿನಿಮಾಗಳ ಜೊತೆ ರಿಷಬ್ ಸಿನಿಮಾ ಸ್ಪರ್ಧೆ ಮಾಡಬೇಕಿದೆ.

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಆ ಬಳಿಕ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ದೇಶನ ಮಾಡಿದರು. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದು, ಬಾಕ್ಸ್ ಆಫೀಸ್ನಲ್ಲಿ 850 ಕೋಟಿ ರೂಪಾಯಿಗೂ ಹೆಚ್ಚಿನ ಬಿಸ್ನೆಸ್ ಮಾಡಿದೆ.ಈ ಸಿನಿಮಾ ಒಟಿಟಿಯಲ್ಲೂ ಪ್ರಸಾರ ಕಂಡಿದೆ. ಹೀಗಿರುವಾಗಲೇ ಸಿನಿಮಾ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದುಕೊಂಡಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ನಿರ್ಮಾಣ ಮಾಡಿದ್ದು ವಿಜಯ್ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್’. ಈ ಸಂಸ್ಥೆ ಪ್ರಸ್ತುತಪಡಿಸಿದ ‘ಮಹಾವತಾರ ನರಸಿಂಹ’ ಕೂಡ ಸಾಮಾನ್ಯ ಪ್ರವೇಶ ಪಟ್ಟಿ ಮೂಲಕ ರೇಸ್ನಲ್ಲಿ ಸ್ಥಾನ ಪಡೆದಿದೆ. ಹಲವು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಈ ಎರಡು ಸಿನಿಮಾಗಳ ಪೈಕಿ ಯಾವುದಾದರೂ ಚಿತ್ರಕ್ಕೆ ಗೆಲುವು ಸಿಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಈವರೆಗೆ ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಸಿಕ್ಕಿಲ್ಲ. ಈ ಮೊದಲು ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದು ದಾಖಲೆ ಬರೆದಿತ್ತು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ರೇಸ್ನಲ್ಲಿ ಈ ಹಾಡು ಸ್ಥಾನ ಪಡೆದುಕೊಂಡಿತ್ತು. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್  ನಿರ್ದೇಶನ ಮಾಡಿ, ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.


Share with

Leave a Reply

Your email address will not be published. Required fields are marked *