ಮಂಗಳೂರಿನ ಯುವಕರಿಗೆ ಮಾದಕ ವಸ್ತು ಸಪ್ಲೈ ಮಾಡುತ್ತಿದ್ದ ಉಗಾಂಡ ಮಹಿಳೆ ಸೆರೆ..! 4 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

Share with

ಮಂಗಳೂರು: ನಗರದಲ್ಲಿ ಯುವಕರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರುಮಂದಿ ಪೆಡ್ಲ‌ರ್ ಗಳಿಗೆ ವ್ಯವಸ್ಥಿತವಾಗಿ ಬೆಂಗಳೂರಿನಿಂದ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ನಾಲ್ಕು ಕೆ.ಜಿ. ಎಂಡಿಎಂಎ ಯೊಂದಿಗೆ ಬೆಂಗಳೂರಿನ ಜಿಗಣಿ ಸರಹದ್ದಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜಲಿಯಾ ಝಲ್ವಾಂಗೊ ಬಂಧಿತ ಮಹಿಳೆ. ಆಕೆಯಿಂದ ವಶ ಪಡಿಸಿಕೊಂಡಿರುವ ಎಂಡಿಎಂಎ ಮೌಲ್ಯ ಸುಮಾರು 4 ಕೋ.ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪೊಲೀಸ್ ಕಸ್ಟಡಿಗೆ ಪಡೆದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮಂಗಳೂರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಜಾಲವನ್ನು ಕತ್ತರಿಸಿದಂತಾಗಿದೆ. ಈಗಾಗಲೇ ಮಂಗಳೂರಿನ 6 ಮಂದಿ ಪೆಡ್ಲರ್ ಗಳನ್ನು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ


Share with

Leave a Reply

Your email address will not be published. Required fields are marked *