ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಖಾಸಗಿ ಕಂಪನಿ! ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಂಪನಿಯಿಂದ ಕ್ಷಮೆ ಯಾಚನೆ

Share with

ನಾನ್ ಕನ್ನಡಿಗ HR ಕೆಲಸಕ್ಕೆ ಬೇಕು ಎಂಬ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಪ್ರಕಟಣೆ ಕನ್ನಡಿಗರನ್ನು ಕೆರಳಿಸಿದೆ. ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಕಂಪನಿ, ಹೆಚ್‌ಆ‌ರ್ ಹುದ್ದೆಗೆ ನೌಕ್ರಿ ಡಾಟ್ ಕಾಂನಲ್ಲಿ ಪ್ರಕಟಣೆ ಹೊರಡಿಸಿದೆ. ‘ಕನ್ನಡಿಗರನ್ನು ಹೊರತು ಪಡಿಸಿ’ ಎಂದು ಪ್ರಕಟಣೆಯಲ್ಲಿ ನಮೂದಿಸಲಾಗಿದೆ. ಇದರಿಂದ ಕನ್ನಡಿಗರು ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡಿಗರನ್ನು ಉದ್ಯೋಗಕ್ಕೆ ಬೇಡ ಅಂತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಿಗರ ಕ್ಷಮೆಯಾಚಿಸಿದ ಖಾಸಗಿ ಕಂಪನಿ..

ನಾನ್ ಕನ್ನಡಿಗ ಹೆಚ್‌ಆರ್ ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿ ಕನ್ನಡಿಗರನ್ನು ಕೆರಳಿಸಿದ್ದ ಖಾಸಗಿ ಕಂಪನಿ ಕ್ಷಮೆಯಾಚನೆ ಮಾಡಿದೆ. ಪ್ರಕಟಣೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸ್ಕಿಲ್ ಸೋನಿಕ್ಸ್ ಕಂಪನಿ ಮ್ಯಾನೇಜ‌ರ್ ಕ್ಷಮೆ ಕೋರಿದ್ದಾರೆ.


Share with

Leave a Reply

Your email address will not be published. Required fields are marked *