ವರ್ಕಾಡಿ: ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಮೃತ್ಯು

Share with

ಮಂಜೇಶ್ವರ: ಅಡುಗೆ ತಯಾರಿ ವೇಳೆ ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿ ಮೃತಪಟ್ಟ ದಾರುಣ ಘಟನೆ ವರ್ಕಾಡಿ ಬಳಿ ಸಂಭವಿಸಿದೆ.

ವರ್ಕಾಡಿ ತೌಡುಗೋಳಿ ಮದಕ್ಕ ಕಲ್ಕಿಂಜದ ಅಬ್ದುಲ್ ಖಾದರ್ ಎಂಬವರ ಪತ್ನಿ ಮೈಮೂನ (40) ಎಂಬವರು ಮೃತಪಟ್ಟ ದುರ್ದೈವಿಯಾ ಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಅಡುಗೆ ತಯಾರಿಸಲು ಗ್ರೈಂಡರ್ ನಲ್ಲಿ ಹುಡಿಮಾಡುತ್ತಿದ್ದಂತೆ ಶಾಲು ಅದರಲ್ಲಿ ಸಿಲುಕಿತ್ತು. ಇದರಿಂದ ಗಂಭೀರ ಗಾಯ ಗೊಂಡ ಮೈಮೂನರನ್ನು ಮನೆ ಯವರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತಿ, ಮಕ್ಕಳಾದ ಸಿದ್ದಿಕ್, ಫಾರೂಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *