ಕೇರಳ: ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ನಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Share with

ಕೊಲ್ಲಂ, ಜನವರಿ 15: ಕೇರಳದ ಕೊಲ್ಲಂನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್‌ನ ಕೋಣೆಯಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 17 ಮತ್ತು 15 ವರ್ಷ ವಯಸ್ಸಿನ ಇಬ್ಬರು ಹುಡುಗಿಯರು ಕೋಳಿಕ್ಕೋಡ್ ಮತ್ತು ತಿರುವನಂತಪುರಂ ನಿವಾಸಿಗಳಾಗಿದ್ದು, ಬೆಳಗಿನ ತರಬೇತಿ ಅವಧಿಗೆ ಬಂದಿರಲಿಲ್ಲ ಎಂದು ಇತರ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಗಮನಿಸಿ ಬಾಗಿಲು ತೆರೆದಾಗ ಆತ್ಮಹತ್ಯೆ(Suicide)ಗೆ ಶರಣಾಗಿರುವುದು ತಿಳಿದುಬಂದಿದೆ.

ಪದೇ ಪದೇ ಬಾಗಿಲು ತಟ್ಟಿದಾಗ ಉತ್ತರಿಸದಿದ್ದಾಗ, ಹಾಸ್ಟೆಲ್ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ ಇಬ್ಬರೂ ಹುಡುಗಿಯರು ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 15 ವರ್ಷದ ಬಾಲಕಿ ಬೇರೆ ಕೋಣೆಯಲ್ಲಿ ತಂಗಿದ್ದಳು ಆದರೆ ಬುಧವಾರ ರಾತ್ರಿ ಆ ಹುಡುಗಿಯ ಕೋಣೆಗೆ ಕಳೆದಿದ್ದಳು. ಅವರನ್ನು ಬೆಳಗಿನ ಜಾವ ಇತರ ಹಾಸ್ಟೆಲ್ ನಿವಾಸಿಗಳು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

17 ವರ್ಷದ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದಳು, ಮತ್ತೊಬ್ಬಳು ಕಬಡ್ಡಿ ಆಟಗಾರ್ತಿ ಮತ್ತು 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಕೊಠಡಿಯಿಂದ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಸಾವಿಗೆ ನಿಖರವಾದ ಕಾರಣಗಳೂ ತಿಳಿದುಬಂದಿಲ್ಲ. ಅವರಿಬ್ಬರು ಮೊದಲೇ ಪರಿಚಿತರೇ, ಆತ್ಮಹತ್ಯೆ ಮಾಡಿಕೊಳ್ಳಲು ಅವರ ಮುಂದೆ ಎದುರಾಗಿದ್ದ ಸಮಸ್ಯೆಗಳೇನು ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.


Share with

Leave a Reply

Your email address will not be published. Required fields are marked *