ಬಿಗ್ ಬಾಸ್ ನಿಂದ ಈ ಎರಡು ಪ್ರಬಲ ಸ್ಪರ್ಧಿಗಳು ಔಟ್..!! ಅಭಿಮಾನಿಗಳಿಗೆ ಶಾಕ್

Share with

ಬೆಂಗಳೂರು: ಬಿಗ್ ಬಾಸ್ ಫಿನಾಲೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಯಾರು ಗೆಲ್ಲುತ್ತಾರೆ ಎನ್ನುವುದರ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ.

ಬಿಗ್ ಬಾಸ್ ಸೀಸನ್ 12 ಫಿನಾಲೆ (Bigg Boss Kannada -12) ಸ್ಪರ್ಧಿಗಳ ಪರವಾಗಿ ಅಬ್ಬರ ಪ್ರಚಾರ ನಡೆದಿದೆ. ಭಾರೀ ದೊಡ್ಡ ಪ್ರಮಾಣದಲ್ಲಿ ವೋಟಿಂಗ್ ಈ ಬಾರಿ ನಡೆದಿದೆ.

ಫಿನಾಲೆಗೆ ಕೆಲವೇ ಕ್ಷಣಗಳು ಬಾಕಿ ಉಳಿದಿದೆ. ಈ ನಡುವೆ ಫಿನಾಲೆ ಸಂಬಂಧಿತ ನಾನಾ ರೀತಿಯ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಮಹಿಳಾ ಸ್ಪರ್ಧಿಗೆ ‘ಬಿಗ್ ಬಾಸ್ ಟ್ರೋಫಿ? – ಸೋಶಿಯಲ್ ಮೀಡಿಯಾದಲ್ಲಿ ವಿನ್ನರ್ ಹೆಸರು ಲೀಕ್

ಇಬ್ಬರು ಪ್ರಬಲ ಸ್ಪರ್ಧಿಗಳು ಟ್ರೋಫಿ ಗೆಲ್ಲುವ ಸಮೀಪಕ್ಕೆ ಬಂದು ಎಲಿಮಿನೇಟ್ ಆಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

‘ಬಿಗ್ ಬಾಸ್ ಸೀಸನ್ 12’ ಶೋ 111 ದಿನಗಳ ಕಾಲ ಸುದೀರ್ಘವಾಗಿ ನಡೆದಿದೆ. ಅಂತಿಮವಾಗಿ ಆರು ಮಂದಿ ಫಿನಾಲೆಗೆ ಬಂದು ತಲುಪಿದ್ದಾರೆ. ಇವರ ಪೈಕಿ ಇಬ್ಬರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ ದಾಖಲೆಯ 37 ಕೋಟಿಗೂ ಅಧಿಕ ವೋಟಿಂಗ್ ಬಂದಿದೆ. ಉಳಿದ ಸ್ಪರ್ಧಿಗಳಿಗೂ ದೊಡ್ಡ ಸಂಖ್ಯೆಯಲ್ಲಿ ವೋಟಿಂಗ್ ಬಂದಿದೆ ಎನ್ನಲಾಗುತ್ತಿದೆ.

ಈ ನಡುವೆ ಫಿನಾಲೆ ಸ್ಥಾನಿಗಳಲ್ಲಿ ಇಬ್ಬರು ಸ್ಪರ್ಧಿಗಳು ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. 6ನೇ ಹಾಗೂ 5ನೇ ಸ್ಥಾನದೊಂದಿಗೆ ಇಬ್ಬರು ಸ್ಪರ್ಧಿಗಳು ಔಟ್ ಆಗಿದ್ದಾರೆ.

ಧನುಷನ್‌ ಅವರು 6ನೇ ಸ್ಥಾನದೊಂದಿಗೆ ಬಿಗ್ ಬಾಸ್ ಪಯಣ ಮುಗಿಸಿದ್ದಾರೆ ಎನ್ನಲಾಗಿದೆ. ಇದರ ಜತೆ ರಘು ಅವರು 4ನೇ ರನ್ನರ್ ಅಪ್ ಆಗಿ ಆಟ ಮುಗಿಸಿದ್ದಾರೆ ಎನ್ನಲಾಗಿದೆ.

ಧನುಷ್ ಹಾಗೂ ರಘು ತಮ್ಮದೇ ಆಟದಿಂದ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆದಿದ್ದರು. ರಘು ಟಾಸ್ಕ್ ಹಾಗೂ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು. ಧನುಷ್ ಶಾಂತ ಸ್ವಭಾವದಿಂದಲೇ ವೀಕ್ಷಕರ ಮನ ಗೆದ್ದಿದ್ದರು.


Share with

Leave a Reply

Your email address will not be published. Required fields are marked *