Udupi: ಶೀರೂರು ಪರ್ಯಾಯೋತ್ಸವ- 1.96 ಲಕ್ಷ ತೆಂಗಿನಕಾಯಿ, 42 ಟನ್ ಬೆಲ್ಲ!

Share with

ಶೀರೂರು ಪರ್ಯಾಯೋತ್ಸವಕ್ಕೆ ಹರಿದುಬಂತು ಭರ್ಜರಿ ಹೊರೆಕಾಣಿಕೆ

ಉಡುಪಿ: ವೈಭವದಿಂದ ನಡೆದ ಶೀರೂರು ಪರ್ಯಾಯೋತ್ಸವಕ್ಕೆ ಹೊರೆಕಾಣಿಯೂ ಭಾರಿ ಪ್ರಮಾಣದಲ್ಲಿ ಹರಿದುಬಂದಿದೆ. ಅದರಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿ ತೆಂಗಿನಕಾಯಿ ಆಗಮಿಸಿದೆ. ಬಂದಿರುವ ವಸ್ತುಗಳಲ್ಲಿ ಬೆಳ್ತಿಗೆ ಅಕ್ಕಿ, ಸಕ್ಕರೆ, ತೊಗರಿಬೇಳೆ ಪ್ರಮಾಣ ಜಾಸ್ತಿಯಾಗಿದೆ.

ಜ.10ರಿಂದ 17ರವರೆಗೆ ವಿವಿಧ ದೇವಸ್ಥಾನಗಳು, ಸಂಘ ಸಂಸ್ಥೆಗಳು, ಬ್ಯಾಂಕ್ ಗಳು, ಭಜನಾ ಮಂಡಳಿಗಳು, ಜಾತಿ ಸಮುದಾಯಗಳು, ನಾಗರಿಕರು ಸಹಿತ 30ಕ್ಕೂ ಅಧಿಕ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಪಾರ್ಕಿಂಗ್ ಪ್ರದೇಶದ ಶ್ರೀ ಅನ್ನವಿಟಲ ಉಗ್ರಾಣದಲ್ಲಿ ಎಲ್ಲ ವಸ್ತುಗಳನ್ನು ದಾಸ್ತಾನು ಇರಿಸಲಾಗಿದೆ.

ಎಲ್ಲ ಭಾಗಗಳಿಂದ ಬಂದಿರುವ ವಸ್ತುಗಳಲ್ಲಿ ತೆಂಗಿನ ಕಾಯಿ ಪ್ರಮುಖವಾಗಿದೆ. ಒಟ್ಟು 1,96,811 ತೆಂಗಿನಕಾಯಿಗಳು ಉಗ್ರಾಣ ಸೇರಿವೆ. ಉಳಿದಂತೆ 9770 ಚೀಲ ಬೆಳ್ಳಿಗೆ ಅಕ್ಕಿ, 4304 ಕೆಜಿ ತೊಗರಿಬೇಳೆ, 42556 ಕೆಜಿ ಬೆಲ್ಲ, 5385 ಕೆಜಿ ಸಕ್ಕರೆ, 2709 ಕೆಜಿ ತೆಂಗಿನ ಎಣ್ಣೆ ಉಗ್ರಾಣದಲ್ಲಿ ಸಂಗ್ರಹವಾಗಿದೆ.

ಉಳಿದ ವಸ್ತುಗಳು ಎಷ್ಟೆಷ್ಟು?

384 ಕೆಜಿ ಕಡ್ಲೆಬೇಳೆ, 349 ಕೆಜಿ ಹೆಸರು ಬೇಳೆ, 812 ಕೆಜಿ ಉದ್ದಿನಬೇಳೆ,, 2726 ಕೆಜಿ ಎಳ್ಳೆಣ್ಣೆ, 285 ಲೀ.ತುಪ್ಪ, 95 ಕೆಜಿ ಮೈದಾ, 79 ಕೆಜಿ ಹುಳಿ, 77 ಕೆಜಿ ಕಡ್ಲೆಹಿಟ್ಟು, 152 ಕೆಜಿ ಫಾಟಿ ಮೆಣಸು, 179 ಕೆಜಿ ಗೋಧಿಹಿಟ್ಟು, 25 ಕೆಜಿ ಬಟಾಣಿ, 45 ಕೆಜಿ ಗೋಡಂಬಿ, 37 ಕೆಜಿ ನೆಲಕಡಲೆ, 40 ಕೆಜಿ ಪುಟಾಣಿ ಕಾಳು, 32 ಕೆಜಿ ಅಕ್ಕಿ ರವೆ, 1765 ಕೆಜಿ ತೆಳು ಅವಲಕ್ಕಿ, 190 ಕೆಜಿ ಬಾಂಬೆ ರವೆ, 150 ಕೆಜಿ ಉಪ್ಪಿಟ್ಟು ರವೆ, 10 ಕೆಜಿ ಕೆಂಪು ಕಡಲೆ, 565 ಕೆಜಿ ಉಪ್ಪು, 1488 ಕೆಜಿ ಅರಳು ಹುಡಿ, 3080 ಕೆಜಿ ಸೌತೆ, 8858 ಕೆಜಿ ಕುಂಬಳಕಾಯಿ, 2113 ಸೀಯಾಳ, 6250 ಕೆಜಿ ಗುಳ್ಳ, 50 ಕೆಜಿ ಗೋಧಿ ಕಡಿ, 2 ಕೆಜಿ ಸಾಬಕ್ಕಿ, 20 ಕೆಜಿ ಅರಶಿನ ಹುಡಿ, 27 ಕೆಜಿ ಹೆಸರು, 18 ಕೆಜಿ ಕಪ್ಪು ಕಡಲೆ, 49 ಕೆಜಿ ಅರಳು, 64 ಕೆಜಿ ಎಣ್ಣೆ, 266 ಬಾಳೆಗೊನೆ, 3 ಲಕ್ಷ ಬತ್ತಿ, 13827 ಬಾಳೆ ಎಲೆ, 40 ಪಿಂಗಾರ, 57 ಕೆಜಿ ಮರಗೆಣಸು, 82 2, 1189 ಕೆಜಿ ಅಡಿಕೆ , 45 ಕೆಜಿ ಸಾಸಿವೆ, 51 ಕೆಜಿ ಹಸಿಮೆಣಸು, 10 ಕೆಜಿ ಅವಡೆಕಾಯಿ, 25 ಕೆಜಿ ಚಹಾ ಹುಡಿ, 2 ಕೆಜಿ ರಾಗಿ, 12 ಕೆಜಿ ಕರಿಎಳ್ಳು, 150 ಕೆಜಿ ಆಲೂಗಡ್ಡೆ, 100 ಕೆಜಿ ಟೊಮೇಟೋ, 20 ಕೆಜಿ ಸಾಬಕ್ಕಿ, 30 ಕೆಜಿ ಉತ್ತುತ್ತೆ, 30 ಕೆಜಿ ದ್ರಾಕ್ಷಿ, 30 ಕೆಜಿ ಬಾದಾಮಿ, 20 ಕೆಜಿ ಕರಿಮೆಣಸು, 20 ಕೆಜಿ ಜೇನು, 100 ಚೀಲ ಹಿಂಡಿ , 10 ಕೆಜಿ ಶುಂಠಿ, 200 ಕೆಜಿ ಕೊತ್ತಂಬರಿ, 500 ಕೆಜಿ ಮುಸಂಬಿ, 50 ಕೆಜಿ ಮುಸಂಬಿ, 50 ಕೆಜಿ ಉಪ್ಪಿನಕಾಯಿ, 10 ಕೆಜಿ ಜೀರಿಗೆ, 5000 ಕೆಜಿ ಕಾಶಿ ಕುಂಬಳ, 2000 ಕೆಜಿ ಸುವರ್ಣ ಗೆಡ್ಡೆ, 100 ಕೆಜಿ ಮರ್ಸಣ್, 150 ಕೆಜಿ ಇತರ ತರಕಾರಿಗಳು, ಸುಮಾರು 7 ಲ.ರೂ.ಮೌಲ್ಯದ ಸ್ಟೀಲ್ ಪಾತ್ರೆ.

ನಿರ್ವಹಣೆ ಹೇಗೆ?

ಶ್ರೀಕೃಷ್ಣ ಮಠದಲ್ಲಿ ನಡೆಯುವ ದಿನನಿತ್ಯದ ಅನ್ನಸಂತರ್ಪಣೆಗೆ ಈ ಎಲ್ಲ ವಸ್ತುಗಳನ್ನು ಬಳಸಲಾಗುತ್ತದೆ. 2 ದಿನಗಳ ಕಾಲ ಈ ಉಗ್ರಾಣ ಇರಲಿದ್ದು, ಬಳಿಕ ಅಕ್ಕಿ, ತೆಂಗಿನಕಾಯಿ, ಎಣ್ಣೆಗಳನ್ನು ಮಿಲ್‌ಗೆ, ದಿನಸಿ ಸಾಮಗ್ರಿಗಳನ್ನು ದಿನಸಿ ಅಂಗಡಿಗೆ, ತರಕಾರಿಗಳನ್ನು ತರಕಾರಿ ಅಂಗಡಿಗೆ ಸಹಿತ ಸಂಬಂಧಪಟ್ಟ ಅಂಗಡಿಗಳಿಗೆ ನೋಡಿ 2 ವರ್ಷಗಳವರೆಗೆ ಅಗತ್ಯಕ್ಕೆ ಅನುಸಾರ ಇಲ್ಲಿಂದ ಮತ್ತೆ ವಾಪಾಸು ಪಡೆಯಲು ನಿರ್ಧರಿಸಲಾಗಿದೆ. ಹೆಚ್ಚುವರಿ ಉಳಿದ ವಸ್ತುಗಳನ್ನು ಹರಾಜು ಹಾಕುವ ಬಗ್ಗೆಯೂ ಮಾತುಕತೆ ನಡೆಸಲಾಗುತ್ತಿದೆ ಎಂದು ಹೊರೆಕಾಣಿಕೆ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *