ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್ ಇಟ್ಟಿದ್ದ ಯುವಕನ ಬಂಧನ

Share with

ಹುಬ್ಬಳ್ಳಿ, ಫೆಬ್ರವರಿ 06: ಹಿಂದೂ ಧರ್ಮಕ್ಕೆ ಅಪಮಾನವಾಗುವ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಇಟ್ಟಿದ್ದ ಯುವಕನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನೂರಾನಿ ಫ್ಲ್ಯಾಟ್ ನಿವಾಸಿ ದಾದಾಪೀರ್ ಹೆಬ್ಬಳ್ಳಿ (27) ಬಂಧಿತ ಯುವಕ. ಹಳೆ ಹುಬ್ಬಳ್ಳಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಳೆದ ರಾತ್ರಿ ಬಂಧಿಸಿ‌ ಜೈಲಿಗಟ್ಟಿದ್ದಾರೆ. ಯೂಟ್ಯೂಬರ್ ಒಬ್ಬರು ಹಿಂದೂ ದೇವರ ಬಳಿ ಕಲ್ಮಾ ಹೇಳಿದ್ದ ವಿಡಿಯೋವನ್ನು ದಾದಾಪೀರ್ ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಈ ಸ್ಟೇಟಸ್ ಹಿಂದೂ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.


Share with

Leave a Reply

Your email address will not be published. Required fields are marked *