ಬಹುನಿರೀಕ್ಷಿತ ಪಿಎಂ ಕಿಸಾನ್ ನಿಧಿಯ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದೇ ತಿಂಗಳು ಮಾ. 13 ರಂದು 22 ನೇ ಕಂತಿನ ಹಣವನ್ನು( ₹2000) ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಕೇಂದ್ರ ಘೋಷಿಸಿದೆ. ಪ್ರಧಾನಿ ಮೋದಿಯವರ ಅಸ್ಸಾಂ ಭೇಟಿಯ ಸಮಯದಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗುವುದು. ಕೇಂದ್ರವು ಪ್ರತಿ ವರ್ಷ ತಲಾ ₹2,000 ರೂ.ಗಳ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಒಟ್ಟು 6,000 ರೂ.ಗಳನ್ನು ಜಮಾ ಮಾಡುತ್ತಿದೆ. ಸುಮಾರು 10 ಕೋಟಿ ಜನರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.





