ಕಾಸರಗೋಡು: ವಾಣಿಜ್ಯ ಅಡುಗೆ ಅನಿಲ ಅಭಾವದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಸಿಲಿಂಡರ್ಗೆ ದುಪ್ಪಟ್ಟು ಬೆಲೆ ತೆರಬೇಕಾಗಿದ್ದು, ಹೊಟೇಲ್ ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರತೀ ಸಿಲಿಂಡರ್ ಮೇಲೆ 750-800 ರೂ. ಹೆಚ್ಚುವರಿ ಪಾವತಿಸಿ ಸಿಲಿಂಡರ್ಪಾವತಿಸುತ್ತಿದ್ದೇವೆ ಎಂದು ಹೊಟೇಲ್ ಮಾಲಕರ ಸಂಘದ ಕೇರಳ ರಾಜ್ಯ ಕಾರ್ಯದರ್ಶಿ ನಾರಾಯಣ ಪೂಜಾರಿ ತಿಳಿಸಿದ್ದಾರೆ.
ಅಡುಗೆ ಅನಿಲ ಕೊರತೆ ಹಾಗೂ ದುಬಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಅನೇಕ ಹೊಟೇಲ್ಗಳಲ್ಲಿ ಸೌದೆ ಒಲೆ ಬಳಕೆ ಆರಂಭಗೊಂಡಿದೆ. ಕೆಲವು ಫಾಸ್ಟ್ಫುಡ್ ಘಟಕಗಳು ತಾತ್ಕಾಲಿಕ ನೆಲೆಯಲ್ಲಿ ಮುಚ್ಚಿವೆ.




