ಕೊಲ್ಲೂರು ದೇಗುಲದ ಸಿಬ್ಬಂದಿಗೆ ನಿಂದನೆ ಆರೋಪ: ದೂರು ದಾಖಲು

Share with

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ನೌಕರ ಸಂಜೀವ ಶೆಟ್ಟಿ (62) ಚಿತ್ತೂರು ಅವರು ಮಾ. 11ರಂದು ಸಂಜೆ ಶ್ರೀ ಮೂಕಾಂಬಿಕಾ ದೇಗುಲದ ಜಾತ್ರೆಯ ಸಲುವಾಗಿ ದೇಗುಲದ ಗರ್ಭಗುಡಿಯ ಪ್ರಾಂಗಣದಲ್ಲಿ ಹೂವಿನ ಅಲಂಕಾರ ಮಾಡಿಸುವ ಕರ್ತವ್ಯ ನಿರತರಾಗಿದ್ದ ಸಂದರ್ಭ ಆರೋಪಿ ವಿನೋದ ಹೆಬ್ಬಾರ್ ಅವಾಚ್ಯ ಶಬ್ದದಿಂದ ಬೈದು ನಿಂದಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

ದೇಗುಲದ ಅಧ್ಯಕ್ಷರಿಗೆ ದೂರು ನೀಡುವುದಾಗಿ ಹೇಳಿ ಅಧ್ಯಕ್ಷರ ಕೋಣೆಯೊಳಗೆ ಹೋಗುತ್ತಿದ್ದಂತೆಯೇ ಸಂಜೀವ ಅವರನ್ನು ಹಿಂಬಾಲಿಸಿದ ಆರೋಪಿ, ನಿಮ್ಮ ಅಧ್ಯಕ್ಷರ ಜತೆ ನಾನೇ ಮಾತನಾಡುತ್ತೇನೆಂದು ಹೇಳಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹಾಗು ಸಮಿತಿ ಸದಸ್ಯ ರಘುರಾಮ ದೇವಾಡಿಗ ಅವರ ಜತೆ ಜಗಳವಾಡಿ, ಏಕವಚನದಲ್ಲಿ ನಿಂದಿಸಿದ್ದಾಗಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *