ಬೇಕಲ್ ಫೆಸ್ಟ್ ವೇಳೆ ರೈಲು ಬಡಿದು ಮಗ ಮೃತ್ಯು; ಖಿನ್ನತೆಗೊಳಗಾಗಿ ಸಾವಿಗೆ ಶರಣಾದ ದಂಪತಿ

Share with

ಕಾಸರಗೋಡು: ಮಗನ ಸಾವಿನಿಂದ ಖಿನ್ನತೆಗೊಳಗಾಗಿ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಯಿನಾಚಿಯಲ್ಲಿ ನಡೆದಿದೆ. ಪೊಯಿನಾಚಿ ಪರಂಬ ನಿವಾಸಿಗಳಾದ ವೇಣುಗೋಪಾಲ್ – ಸ್ಮಿತಾ ದಂಪತಿ ಆತ್ಮಹತ್ಯೆ ನಡೆಸಿದವರಾಗಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಬೇಕಲ ಫೆಸ್ಟ್ ವೇಳೆ ರೈಲು ಡಿಕ್ಕಿಯಾಗಿ ಮೃತಪಟ್ಟ ಯುವಕ ಶಿವಾನಂದನ ತಾಯಿ-ತಂದೆ ಇವರಾಗಿದ್ದಾರೆ. ಮಗನ ಮರಣದ ಬಳಿಕ ತಾಯ್ತಂದೆಯರಾದ ಇವರು ಖಿನ್ನತೆಗೆ ಒಳಗಾಗಿದ್ದರು.

ಡಿ. 29ರಂದು ಶಿವಾನಂದ ಮೃತರಾಗಿದ್ದರು. ತದನಂತರ ಈ ದಂಪತಿಯರು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಮನೆಯ ಹಾಲ್ ನಲ್ಲಿ ದಂಪತಿಯರು ನೇಣು ಬಿಗಿದು ಸಾವಪ್ಪಿದ ಸ್ಥಿತಿಯಲ್ಲಿ ಪತ್ತೆಯಾದರು. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Share with

Leave a Reply

Your email address will not be published. Required fields are marked *