ರೌಡಿ ಶೀಟರ್ ಆರೀಫ್ ಹತ್ಯೆ ಪ್ರಕರಣ: ಸಿಸಿಬಿ ಪೊಲೀಸರು ಸೇರಿ ವಿಶೇಷ ಪತ್ತೆ ದಳ ರಚನೆ

Share with

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಮೀನಿನ ವ್ಯಾಪಾರಿ, ರೌಡಿ ಶೀಟರ್‌ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಹುಸೇನ್ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಕೊಲೆಯಾದ ಆರೀಫ್ ಪುತ್ರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೌಫಾಲ್ ಸಹಚರ ಮಹಮ್ಮದ್ ರಿಫಾತ್ ಆಲಿ ನೇತೃತ್ವದ ತಂಡ ಕೊಲೆ ಮಾಡಿದ್ದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೀಫ್‌ ಕೊಲೆ ನಡೆಸಿದ್ದ ಹಂತಕರು ಇನ್ನೋವಾ ಕಾರನ್ನು ವಿಟ್ಲ ಬುಡೋಳಿಯಲ್ಲಿ ಬಿಟ್ಟು ಹೋಗಿದ್ದರು. ಬಳಿಕ ರಿಕ್ಷಾವೊಂದರಲ್ಲಿ ತೆರಳಿ ಬಸ್ಸು ಮೂಲಕ ಬೆಂಗಳೂರಿಗೆ ತೆರಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಹತ್ಯೆಗೆ ಸಂಬಂಧಿಸಿದಂತೆ ಮಂಗಳೂರು ಕಮಿಷನರ್‌ಸುಧೀರ್‌ರೆಡ್ಡಿ ನೇತೃತ್ವದಲ್ಲಿ ಸಿಸಿಬಿ ಪೊಲೀಸರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಹಂತಕರ ಒಂದಷ್ಟು ಸುಳಿವು ಇದ್ದರೂ ಅವರ ಮೊಬೈಲ್ ಸ್ವಿಚ್ ಆಫ್ ಇದ್ದ ಕಾರಣ ಆರೋಪಿಗಳ ಪತ್ತೆ ಕಾರ್ಯ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಆರೋಪಿಗಳು ಪರಾರಿಯಾಗಲು ಸಹಕರಿಸಿದ ಮತ್ತು ಹಣಕಾಸು ನೆರವು ನೀಡಿದವರನ್ನೂ ಆರೋಪಿಗಳು ಎಂದು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆಯೇ ಹಂತಕರ ತಂಡ ಕೇರಳ ಅಥವಾ ಮುಂಬಯಿ ಕಡೆಗೂ ಪ್ರಯಾಣ ಬೆಳೆಸಿರುವ ಬಗ್ಗೆಯೂ ಪೊಲೀಸರು ತನಿಖೆಯನ್ನು ವಿಸ್ತರಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *