ರಾಜ್ಯಕ್ಕೆ ವಾಣಿಜ್ಯ LPG ಸಿಲಿಂಡರ್ ಪೂರೈಕೆಯನ್ನು ಶೇ.68’ಗೆ ಹೆಚ್ಚಿಸಲಾಗಿದೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಇಂದಿನಿಂದಲೇ ಹೆಚ್ಚುವರಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳನ್ನು ವಿತರಿಸುತ್ತಿದೆ.

ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಆಸ್ಪತ್ರೆ ಮತ್ತು ಇತರೆ ಅವಶ್ಯಕ ಸಂಸ್ಥೆಗಳಿಗೆ 4,200 ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ಸರ್ಕಾರಿ, ಪಿಎಸ್ಯು ಸಂಸ್ಥೆಗಳು, ರೈಲು, ಬಸ್ ನಿಲ್ದಾಣಗಳ ಕ್ಯಾಂಟೀನ್ಗಳಿಗೆ 1,200 ಸಿಲಿಂಡರ್ ಹಂಚಲಾಗಿದೆ ಎಂದಿದ್ದಾರೆ.




