ವಾಣಿಜ್ಯ LPG ಸಿಲಿಂಡ‌ರ್ ಪೂರೈಕೆ 68%ರಷ್ಟು ಹೆಚ್ಚಳ

Share with

ರಾಜ್ಯದಲ್ಲಿ LPG ಕೊರತೆ ಹಿನ್ನೆಲೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡುತ್ತಿದ್ದ LPG ಹಂಚಿಕೆಯನ್ನು 68%ಕ್ಕೆ ಹೆಚ್ಚಿಸಿದ್ದು, ಇದೀಗ ಅಗತ್ಯ ಹಾಗೂ ಆದ್ಯತೆಗೆ ತಕ್ಕಂತೆ ವಿತರಣೆಯನ್ನು ಆರಂಭಿಸಲಾಗಿದೆ ಎಂದು ಸಚಿವ K.H ಮುನಿಯಪ್ಪ ಹೇಳಿದ್ದಾರೆ.

ಭಾನುವಾರದಿಂದ ಪ್ರತಿದಿನ 29,463 ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಸಲಾಗುತ್ತಿದ್ದು, ಹೋಟೆಲ್‌ಗಳಿಗೆ ದಿನಕ್ಕೆ 17,500 ಸಿಲಿಂಡರ್ ವಿತರಿಸಲಾಗುತ್ತಿದೆ. ಇದರಿಂದ ಅವರ ಬೇಡಿಕೆಯ 60%ರಷ್ಟು ಪೂರೈಕೆ ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *