ನಿಮ್ಮ ತಾಯಿಯ ತಂದೆಯ ಆಸ್ತಿಯಲ್ಲಿ ತಾಯಿಗೆ ಭಾಗ ಬಂದೇ ಬರುತ್ತದೆ. ಎಷ್ಟು ಮಕ್ಕಳಿದ್ದಾರೆ ಎಂಬ ಆಧಾರದ ಮೇಲೆ ಆಸ್ತಿ ಭಾಗ ಆಗುತ್ತದೆ. ಒಂದು ವೇಳೆ ಭಾಗ ಸಿಗದಿದ್ದರೆ ವಿಭಾಗದ ಕೇಸು ಹಾಕಿ. ಹಣ ಇಲ್ಲದಿದ್ದರೆ ಉಚಿತ ಕಾನೂನು ಸೇವೆಯ ಸಹಾಯ ಪಡೆಯಿರಿ.

ಒಂದು ಪೈಸೆಯೂ ಖರ್ಚು ಮಾಡದೆ ನಿಮ್ಮ ತಾಯಿ ನ್ಯಾಯ ಪಡೆಯಬಹುದು. ತಾಲೂಕಿನ ನ್ಯಾಯಾಲಯದಲ್ಲಿ ಇರುವ ಕಾನೂನು ಸೇವಾ ಕೇಂದ್ರಕ್ಕೆ ಹೋಗಿ, ಇದರ ಬಗ್ಗೆ ಅವರೇ ಎಲ್ಲಾ ಮಾಹಿತಿ ಕೊಡುತ್ತಾರೆ.




