ಇರಾನ್, ಅಮೆರಿಕ ಮೂಲದ ಗೂಗಲ್, ಮೈಕ್ರೋಸಾಫ್ಟ್, ಆಪಲ್, ಇಂಟೆಲ್, ಐಬಿಎಂ, ಟೆಸ್ಲಾ, ಮೆಟಾ ಸೇರಿದಂತೆ ಸುಮಾರು 18 ದೈತ್ಯ ಕಂಪನಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಿ ಎಚ್ಚರಿಸಿದೆ.

ಈ ಬಗ್ಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್(IRGC) ಹೇಳಿಕೆ ಬಿಡುಗಡೆ ಮಾಡಿದ್ದು, ದುಬೈ, ಕುವೈತ್ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಈ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಜೀವ ಕಾಪಾಡಬೇಕಾದರೆ ಈ ಕೂಡಲೇ ಕೆಲಸದ ಸ್ಥಳ ಬಿಟ್ಟು ತೆರಳಬೇಕು ಎಂದು ಎಚ್ಚರಿಸಿದೆ.




