ಗ್ರಾಹಕರ ಬೇಡಿಕೆಯಲ್ಲಿ ಗಮನಾರ್ಹ ಹೆಚ್ಚಳ…

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಖಾಸಗಿ ಆಟೋ ಎಲ್‌ಪಿಜಿ ಕೇಂದ್ರಗಳು ಬಂದ್ ಆಗಿರುವುದು, ಕೆಲವಡೆ ಭಾಗಶಃ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೇಡಿಕೆ ಆಧರಿಸಿ ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಪೂರೈಕೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಇಂಡಿಯನ್ ಆಯಿಲ್) ಮುಂದಾಗಿದೆ.
ಇಂಡಿಯನ್ ಆಯಿಲ್ ಪ್ರಸ್ತುತ ರಾಜ್ಯಾದ್ಯಂತ ಹರಡಿರುವ 55 ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳ (ಎಎಲ್ ಡಿಎಸ್) ವ್ಯಾಪಕ ಜಾಲದ ಮೂಲಕ ಆಟೋ ರಿಕ್ಷಾಗಳು ಮತ್ತು ಎಲ್‌ಪಿಜಿ ಚಾಲಿತ ಕಾರುಗಳ ಇಂಧನ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಖಾಸಗಿಯವರು ನಿರ್ವಹಿಸುವ 300ಕ್ಕೂ ಹೆಚ್ಚು ಮಳಿಗೆಗಳ ಪೈಕಿ ಅನೇಕವು ಬಂದ್ ಆಗಿವೆ.
ಹಲವು ಭಾಗಶಃ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದಲ್ಲಿ ಇಂಡಿಯನ್ ಆಯಿಲ್‌ನಲ್ಲಿ ಸರಾಸರಿ ದೈನಂದಿನ ಮಾರಾಟವು 59.53 ಮೆಟ್ರಿಕ್ ಟನ್‌ಗಳಿಗೆ ತೀವ್ರವಾಗಿ ಏರಿದೆ. ಇದು ಹಿಂದಿನ3 ತಿಂಗಳ ಸರಾಸರಿ 43.4 ಎಂಟಿಗೆ ಹೋಲಿಸಿದರೆ, ಗ್ರಾಹಕರ ಬೇಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದು ದಕ್ಷಿಣ ಪ್ರಾದೇಶಿಕ ಕಚೇರಿಯ ಇಂಡಿಯನ್ ಆಯಿಲ್‌ನ ಮುಖ್ಯ ಜನರಲ್ ಮ್ಯಾನೇಜರ್(ಕಾರ್ಪೊರೇಟ್ ಸಂವಹನ) ವಿ ವೆಟ್ರಿ ಸೆಲ್ವಕ್ ಕುಮಾರ್‌ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಾಗ ಮತ್ತು ಎಲ್ಲಾ ವಲಯಗಳಲ್ಲಿ ಸಮಾನ ವಿತರಣೆಯನ್ನು ಕಾಯ್ದುಕೊಳ್ಳುವಾಗ ಸರಾಗ ಇಂಧನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಇಂಡಿಯನ್ ಆಯಿಲ್ ಬದ್ಧವಾಗಿದೆ ಎಂದು ಇಂಡಿಯನ್ ಆಯಿಲ್‌ನ ದಕ್ಷಿಣ ಪ್ರಾದೇಶಿಕ ಕಚೇರಿಯ ಇಂಡಿಯನ್ ಆಯಿಲ್‌ನ ಮುಖ್ಯ ಜನರಲ್ ಮ್ಯಾನೇಜರ್(ಕಾರ್ಪೊರೇಟ್ ಸಂವಹನ) ವಿ ವೆಟ್ರಿ ಸೆಲ್ವಕ್ ಕುಮಾರ್‌ತಿಳಿಸಿದ್ದಾರೆ.
ಬೇಡಿಕೆ ಹೆಚ್ಚಿದ್ದರಿಂದ ಜನರು ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಕೇಂದ್ರಗಳ ಕಡೆಗ ಮುಖ ಮಾಡಿದ್ದಾರೆ. ತನ್ನ ಮೂಲಸೌಕರ್ಯದ ಮೇಲೆ ಹೆಚ್ಚಿದ ಕಾರ್ಯಾಚರಣೆಯ ಹೊರೆಯ ಹೊರತಾಗಿಯೂ ಈ ಸವಾಲಿನ ಅವಧಿಯಲ್ಲಿ ಎಲ್‌ಪಿಜಿ ಚಾಲಿತ ವಾಹನಗಳಿಗೆ ನಿರಂತರ ಪೂರೈಕೆ ಮತ್ತು ಪರಿಣಾಮಕಾರಿ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇಂಡಿಯನ್ ಆಯಿಲ್ ಸಂಘಟಿತ ಪ್ರಯತ್ನಗಳನ್ನು ಮಾಡಿದೆ.




