2026-27 ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವ ಪಠ್ಯಕ್ರಮವನ್ನು CBSE ಪ್ರಕಟಿಸಿದೆ. 6ನೇ ತರಗತಿಯಿಂದ ತ್ರಿಭಾಷಾ ಸೂತ್ರ (3 ಭಾಷೆಗಳ ಕಲಿಕೆ) ಕಡ್ಡಾಯವಾಗಲಿದೆ. ಇದರಲ್ಲಿ 2 ಭಾರತೀಯ ಭಾಷೆಗಳಾಗಿರಬೇಕು. ಇಂಗ್ಲಿಷ್ ಅನ್ನು ವಿದೇಶಿ ಭಾಷೆಯಾಗಿ ಪರಿಗಣಿಸಲಾಗುತ್ತದೆ.

ಜೊತೆಗೆ ಗಣಿತ, ವಿಜ್ಞಾನ ವಿಷಯಗಳಲ್ಲಿ ಟೂ-ಲೆವೆಲ್ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. 80 ಅಂಕಗಳ ಸಾಮಾನ್ಯ ಪರೀಕ್ಷೆ ಬರೆಯುವುದು ಕಡ್ಡಾಯ. ಮತ್ತೊಂದು 25 ಅಂಕಗಳ ಅಡ್ವಾನ್ಸ್ ಮಟ್ಟದ ಪರೀಕ್ಷೆ ಇರುತ್ತದೆ, ಇದು ಐಚ್ಛಿಕವಾಗಿದೆ.




