ಚಿಕ್ಕಮಗಳೂರು: ತಾಲೂಕಿನ ಅರಳಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋದ ನಾಲ್ವರು ಮಕ್ಕಳು ನೀರು ಪಾಲಾದ ದಾರುಣ ಘಟನೆ ಸೋಮವಾರ(ಮೇ4) ನಡೆದಿದೆ.

ಮೃತ ದುರ್ದೈವಿ ಮಕ್ಕಳು 5 ರಿಂದ 14 ವರ್ಷದೊಳಗಿನವರಾಗಿದ್ದು,ಮಹಾದಿಯಾ, ಅರುನುಸ್, ನಾಯುಸ್, ಅಬ್ದುಲ್ ರೆಹಮಾನ್ ಎಂದು ತಿಳಿದು ಬಂದಿದೆ. ಸಂಬಂಧಿಕರ ಮನೆಗೆ ಬಂದಾಗ ದುರ್ಘಟನೆ ನಡೆದಿದೆ. ನಾಲ್ಕು ಮಕ್ಕಳು ನೀರುಪಾಲಾಗಿದ್ದರೆ, ನಾಲ್ಕು ವರ್ಷದ ಬಾಲಕ ಅರ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಾತುಕೋಳಿ ಕೆರೆಗೆ ಹೋಯಿತು ಎಂದು ಹಿಡಿಯಲು ಹೋಗಿ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆಸ್ಪತ್ರೆ ಮುಂಭಾಗ ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.




