ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್ ಗುರುವಾರ (ಜೂ.25) ಸಂಜೆ ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ವಿಮಾನ ನಿಲ್ದಾಣದ ಹೊರಗಡೆ ಶಾರುಖ್ ಖಾನ್ ಅವರು ಸೇರಿದ್ದ ಜನರತ್ತ ಕೈ ಬೀಸಿದರು. ಬಳಿಕ ನಿಗದಿಪಡಿಸಿದ್ದ ಕಾರಿನಲ್ಲಿ ಹೊರಟರು.
ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿರುವ ‘ಆನ್ ಈವಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗವಹಿಸಲಿದ್ದಾರೆ. ಇದರಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಪೂರ್ವ ನೋಂದಣಿ ಮಾಡಿಕೊಂಡಿರುವ ಅತಿಥಿಗಳು ಭಾಗವಹಿಸುತ್ತಿದ್ದಾರೆ.




