ಆಗಸದಲ್ಲಿ ಮೋಡಗಳೇ ನಾಪತ್ತೆ..! ದೇಶದಲ್ಲಿ 45% ಮುಂಗಾರು ಮಳೆಯ ಕೊರತೆ..!!

Share with

ನವದೆಹಲಿ: ದೇಶಾದ್ಯಂತ ನೈಋತ್ಯ ಮುಂಗಾರು ಮಾರುತಗಳು ಪ್ರವೇಶ ಪಡೆದಿದ್ದರೂ, ಭಾರತದ ಪ್ರಮುಖ ಭೂಭಾಗಗಳಲ್ಲಿ ಮೋಡಗಳೇ ಕಾಣಿಸದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಭಾರತದ ಇನ್ಸಾಟ್-3ಡಿಆರ್ ಉಪಗ್ರಹ ಸೆರೆಹಿಡಿದಿರುವ ಚಿತ್ರಗಳು ಈ ಆಘಾತಕಾರಿ ಅಂಶವನ್ನು ಹೊರಹಾಕಿದ್ದು, ಕೇಂದ್ರ, ಪಶ್ಚಿಮ ಮತ್ತು ವಾಯುವ್ಯ ಭಾರತದ ಆಕಾಶ ಮಳೆ ತರುವ ದಟ್ಟ ಮೋಡಗಳಿಲ್ಲದೆ ನಿಗೂಢ ರೀತಿಯಲ್ಲಿ ಭಾಸವಾಗುತ್ತಿವೆ ಎಂದು ವರದಿ ಹೇಳಿದೆ.

ವಾತಾವರಣದಲ್ಲಿ ಸಾಕಷ್ಟು ತೇವಾಂಶವಿದ್ದರೂ ಮೋಡಗಳು ಸೃಷ್ಟಿಯಾಗದಿರಲು ವಾಯುಭಾರ ಕುಸಿತದ ಕೊರತೆಯೇ ಮುಖ್ಯ ಕಾರಣ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ. ಅಲ್ಲದೇ ಜೂ.1ರಿಂದ 26ರವರೆಗೆ ದೇಶಾದ್ಯಂತೆ ಶೇ.45ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


Share with

Leave a Reply

Your email address will not be published. Required fields are marked *