ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್ ಪುತ್ರ ಉಲ್ಲಾಸ್(29) ಹೃದಯಘಾತದಿಂದ ನಿಧನರಾಗಿದ್ದಾರೆ.

ಶಿವಮೊಗ್ಗದ ಕೊಡಚಾದ್ರಿಗೆ ಟ್ರಕ್ಕಿಂಗ್‌ಗೆ ತೆರಳಿದ್ದಾಗ ಉಲ್ಲಾಸ್‌ಗೆ ಹೃದಯಘಾತ ಸಂಭವಿಸಿದೆ. ಇತ್ತೀಚಿಗಷ್ಟೇ ಉಲ್ಲಾಸ್‌ಗೆ ಮದುವೆ ನಿಶ್ಚಯವಾಗಿತ್ತು. ಇದೇ ವರ್ಷ ಡಿಸೆಂಬರ್‌ನಲ್ಲಿ ಮದುವೆ ನಡೆಸಲು ಉದ್ದೇಶಿಸಲಾಗಿತ್ತು. ಸದ್ಯ ಉಲ್ಲಾಸ್ ಅವರ ಮೃತ ದೇಹವನ್ನು ಬೆಂಗಳೂರಿಗೆ ತರಲಾಗುತ್ತಿದೆ.




