ಹೊಸದಿಲ್ಲಿ: ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್(WhatsApp) ಆಗಾಗ ಹೊಸ ಹೊಸ ಫೀಚರ್ಗಳನ್ನು ನೀಡುತ್ತಿರುತ್ತದೆ, ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡುವ ಕಾರಣದಿಂದ ವಾಟ್ಸಾಪ್ ಹೊಸ ಫೀಚರ್ ಗಳನ್ನು ಪರಿಚಯಿಸುತ್ತದೆ. ಇದೀಗ ಬಲವಾದ ಗೌಪ್ಯತೆ ನಿಯಂತ್ರಣಗಳೊಂದಿಗೆ ವಾಟ್ಸಾಪ್ ಚಾಟ್ಗಳು ಶೀಘ್ರದಲ್ಲೇ ಇನ್ಸ್ಟಾಗ್ರಾಂ (Instagram) ನಂತೆ ಭಾಸವಾಗಬಹುದು.

ಮೆಟಾ-ಮಾಲೀಕತ್ವದ ವೇದಿಕೆಯು ಬಳಕೆದಾರ ಹೆಸರುಗಳನ್ನು (Username) ಪರಿಚಯಿಸಲು ತಯಾರಿ ನಡೆಸುತ್ತಿದೆ. ಇದು ಬಳಕೆದಾರರು ತಮ್ಮ ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳದೆಯೇ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಇದು ಸಂವಹನಗಳನ್ನು ಹೆಚ್ಚು ಖಾಸಗಿಯಾಗಿ ಮಾಡುತ್ತದೆ.
ಈ ಹೊಸ ಅಪ್ಲೇಟ್ ನಿಮ್ಮ ಫೋನ್ ಸಂಖ್ಯೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ಸಂಪರ್ಕಿಸಬಹುದಾದ ಪ್ರಸ್ತುತ ವ್ಯವಸ್ಥೆಯಿಂದ ಬದಲಾವಣೆ ತರಲಿದೆ. ಜಾಗತಿಕವಾಗಿ 3 ಬಿಲಿಯನ್ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಇಲ್ಲಿಯವರೆಗೆ ಸಂಪರ್ಕ ಸಾಧಿಸಲು ಮುಖ್ಯ ಮಾರ್ಗವಾಗಿ ಫೋನ್ ಸಂಖ್ಯೆಗಳನ್ನು ಅವಲಂಬಿಸಿದೆ.
ಈ ಫೀಚರ್ “ನಿಮ್ಮ ಫೋನ್ ಸಂಖ್ಯೆಯ ಗೌಪ್ಯತೆಯನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಫಿನ್ಟೆಕ್ ಸಂಸ್ಥಾಪಕ ಕುನಾಲ್ ಶಾ ಅವರು ಮೆಟಾದ ವಾಟ್ಸಾಪ್ನ ಉಸ್ತುವಾರಿ ವಹಿಸಿಕೊಂಡಂತೆ ಈ ಹೊಸ ಫೀಚರ್ ಅಪ್ಲೇಟ್ ಬಂದಿದೆ. ಕಂಪನಿಯು ಪ್ಲಾಟ್ಫಾರ್ಮ್ನ ವಿಶಾಲ ಜಾಗತಿಕ ವ್ಯಾಪ್ತಿಯನ್ನು ಬಳಸಿಕೊಳ್ಳಲು ಮತ್ತು ವೇಗವಾಗಿ ಬೆಳೆಯುತ್ತಿರುವ ಆನ್ಲೈನ್ ಪಾವತಿಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಅದನ್ನು “ಸೂಪರ್ ಅಪ್ಲಿಕೇಶನ್” ಆಗಿ ವರ್ಧಿಸಲು ನೋಡುತ್ತಿದೆ.
ಏನೆಲ್ಲಾ ಬದಲಾವಣೆ?
ಬಳಕೆದಾರ ಹೆಸರುಗಳೊಂದಿಗೆ, ಕೆಲವು ಸಂದರ್ಭಗಳಲ್ಲಿ ನಿಮ್ಮ ಫೋನ್ ಸಂಖ್ಯೆ ಇನ್ನು ಮುಂದೆ ನೇರವಾಗಿ ಗೋಚರಿಸುವುದಿಲ್ಲ.
ನಿಮ್ಮನ್ನು ದೊಡ್ಡ ಗುಂಪು ಚಾಟ್ (Group chat) ಗಳಿಗೆ ಸೇರಿಸಿದಾಗ, ನೀವು ಮೊದಲ ಬಾರಿಗೆ ಒಬ್ಬ ವ್ಯಕ್ತಿಗೆ ಸಂದೇಶ ಕಳುಹಿಸಿದಾಗ, ಇದು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೀವು ಬಯಸದ ಹೊರತು ನಿಮ್ಮ ಮೊಬೈಲ್ ಸಂಖ್ಯೆ ಖಾಸಗಿಯಾಗಿಯೇ ಇರುತ್ತದೆ. ನಿಮ್ಮ ಯೂಸರ್ ನೇಮ್ ಮಾತ್ರ ಡಿಸ್ಪ್ಲೇ ಆಗುತ್ತದೆ.
ಯೂಸರ್ ನೇಮ್ ಹೇಗೆ ಕೆಲಸ ಮಾಡುತ್ತದೆ?
ಬಳಕೆದಾರರು ಫೋನ್ ಸಂಖ್ಯೆಯ ಬದಲಿಗೆ ಇತರರು ಅವರನ್ನು ಸಂಪರ್ಕಿಸಲು ಬಳಸಬಹುದಾದ ವಿಶಿಷ್ಟ ಯೂಸರ್ ನೇಮ್ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಯೂಸರ್ ನೇಮ್ ಮೂರರಿಂದ 35 ಅಕ್ಷರಗಳ ನಡುವೆ ಇರಬೇಕು. ಮೂಲತಃ, ಇದನ್ನು ಸಾಮಾಜಿಕ ಮಾಧ್ಯಮ ಗುರುತಿಗಿಂತ ಗೌಪ್ಯತೆಯ ವೈಶಿಷ್ಟ್ಯವಾಗಿ ವಿನ್ಯಾಸಗೊಳಿಸಲಾಗಿದೆ. ಜನರು ನಿಮ್ಮನ್ನು ಮೊದಲ ಬಾರಿಗೆ ಸಂಪರ್ಕಿಸಲು ನಿಮ್ಮ ನಿಖರವಾದ ಯೂಸರ್ ನೇಮ್ ತಿಳಿದುಕೊಳ್ಳಬೇಕಾಗುತ್ತದೆ.
ಬಳಕೆದಾರರು ತಮ್ಮನ್ನು ಯಾರು ಸಂಪರ್ಕಿಸಬಹುದು ಎಂಬುದನ್ನು ನಿಯಂತ್ರಿಸಲು “ಯೂಸರ್ ನೇಮ್ ಕೀ” ಅನ್ನು ಸೆಟ್ ಮಾಡಬಹುದು. ಮೊದಲ ಬಾರಿಗೆ ಅವರ ಯೂಸರ್ ನೇಮ್ ಮೂಲಕ ಸಂದೇಶಗಳನ್ನು ಕಳುಹಿಸುವಾಗ ಈ ಕೀ ಅಗತ್ಯವಿರುತ್ತದೆ, ಇದು ಹೆಚ್ಚುವರಿ ರಕ್ಷಣೆಯ ಪದರವನ್ನು ಸೇರಿಸುತ್ತದೆ. ಕೀಯನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು.
ಯೂಸರ್ ನೇಮ್ ಹೇಗೆ ಕಾಯ್ದಿರಿಸುವುದು?
ವಾಟ್ಸಾಪ್ನ ಇತ್ತೀಚಿನ ಆವೃತ್ತಿಯಲ್ಲಿ ಈ ಪ್ರಕ್ರಿಯೆಯು ಕೆಲವೇ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತದೆ.
- ಸೆಟ್ಟಿಂಗ್ಗಳಿಗೆ ಹೋಗಿ
- ಅಕೌಂಟ್ ಟ್ಯಾಪ್ ಮಾಡಿ
- ಯೂಸರ್ ನೇಮ್ ಆಯ್ಕೆಮಾಡಿ




