ಬಂದಾರು: ಮೊಬೈಲ್ ಟವರ್ ಜನರೇಟರ್‌ನ ಡೀಸೆಲ್ ಕಳ್ಳತನ ; ಮೂವರು ಸೆರೆ

Share with

ಬೆಳ್ತಂಗಡಿ: ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿ ಏರ್‌ಟೆಲ್ ಮೊಬೈಲ್ ಟವರ್‌ನ ಜನರೇಟರ್‌ನಿಂದ ಡೀಸೆಲ್ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಸ್ಥಳೀಯರು ರೆಡ್‌ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಆಗಸ್ಟ್ 24ರಂದು ವರದಿಯಾಗಿದೆ.

ಮೈರೋಳ್ತಡ್ಕದಲ್ಲಿರುವ ಏರ್‌ಟೆಲ್ ಮೊಬೈಲ್ ಟವರ್‌ನ ಜನರೇಟರ್‌ನಿಂದ ಕಳೆದ ಹಲವಾರು ದಿನಗಳಿಂದ ಡೀಸೆಲ್ ಕಳ್ಳತನವಾಗುತ್ತಿರುವ ಬಗ್ಗೆ ಸ್ಥಳೀಯರಿಗೆ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ರಾತ್ರಿ ವೇಳೆ ಟವರ್ ಬಳಿ ಕಾವಲು ಕಾಯುತ್ತಿದ್ದರು.

ಈ ವೇಳೆ ಅಲ್ಲಿಗೆ ಬಂದ ಮೂವರು ಡೀಸೆಲ್ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ, ಸ್ಥಳೀಯರು ಒಗ್ಗೂಡಿ ಅವರನ್ನು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬಂಧಿತರಾದ ಯುವಕರು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯವರು ಎಂದು ವರದಿಯಾಗಿದೆ. ಡೀಸೆಲ್ ಕಳವು ಆರೋಪದಡಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.


Share with

Leave a Reply

Your email address will not be published. Required fields are marked *