ಮಂಗಳೂರು ದಸರಾ ಮಹೋತ್ಸವಕ್ಕೆ ಭಕ್ತಿಭಾವದ ಚಾಲನೆ

Share with

ಮಂಗಳೂರು: ‘ಮಂಗಳೂರು ದಸರಾ’ಎಂದೇ ಪ್ರಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಪುರಾಣ ಪ್ರಸಿದ್ದ ಶ್ರೀ ಮಂಗಳಾದೇವಿ ದೇವಸ್ಥಾನ ಸಹಿತ ಮಂಗಳೂರು ನಗರ ಹಾಗೂ ಹೊರ ವಲಯದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವ ರವಿವಾರ (ಅ.11) ಶ್ರದ್ದಾಭಕ್ತಿಯಿಂದ ಆರಂಭಗೊಂಡಿತು.

ಮುಂಜಾನೆ ವೇಳೆ ಗಣಪತಿ ಪೂಜೆ, ಪುಣ್ಯಾವಾಚನ, ಕಲಶ ಪ್ರತಿಷ್ಠಾಪನೆ, ಕೊಪ್ಪರಿಗೆ ಮುಹೂರ್ತ, ದೇವಿ ಪಾರಾಯಣ ಮೊದಲಾದ ಧಾರ್ಮಿಕ- ವೈದಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವಕ್ಕೆ ಚಾಲನೆ ಸಿಕ್ಕಿತು.

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಕೇಂದ್ರದ ಮಾಜಿ ಸಚಿವ ಬಿ. ಜರ್ನಾದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ಶಾರದೆ, ಗಣಪತಿ ಸಹಿತ ನವದುರ್ದೆಯರ ಪ್ರತಿಷ್ಠಾಪನೆ ನೆರವೇರಿತು. ಜಿಲ್ಲಾಧಿಕಾರಿ ದರ್ಶನ ಎಚ್.ವಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಸಹಿತ ಪ್ರಮುಖರು ಭಾಗವಹಿಸಿದ್ದರು


Share with

Leave a Reply

Your email address will not be published. Required fields are marked *