ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿದೆ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ

Share with

ಕಾಪು: ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದೇವಸ್ಥಾನದ ಆವರಣ, ಸ್ವಾಗತ ಗೋಪುರ ಹಾಗೂ ದಸರಾ ದರ್ಬಾರ್ ಮಂಟಪ ಬೆಳಕಿನ ವೈಭವದಲ್ಲಿ ಮಿಂದೇಳುತ್ತಿದೆ.

ದೇವಸ್ಥಾನದ ಸುತ್ತಲೂ ಸ್ಟ್ರೀಟ್ ಲೈಟ್ಸ್, ಮಿನಿಯೇಚರ್ ಲೈಟ್ಸ್, ಡಿಸೈನ್ ಬೋರ್ಡ್‌ಗಳು ಹಾಗೂ ಎಲ್‌ಇಡಿ ಬಲ್ಟ್ ಗಳ ಮೂಲಕ ಆಕರ್ಷಕ ಬೆಳಕಿನ ವಿನ್ಯಾಸ ರೂಪಿಸಲಾಗಿದೆ. ಹಾಗೂ ವಿವಿಧ ವಿನ್ಯಾಸ ಫಲಕಗಳು, ಚೆಂಡೆ ಪ್ರತಿಕೃತಿಗಳು, ಬೃಹತ್ ನವಿಲು, ಮಹಾಲಕ್ಷ್ಮೀ ಮತ್ತು ದುರ್ಗಾದೇವಿ ಪ್ರತಿಕೃತಿಗಳು ಗಮನ ಸೆಳೆಯುತ್ತಿವೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಡುಬಿದ್ರಿಯಿಂದ ಕಾಪುವಿನ ಕೆ1 ಜಂಕ್ಷನ್‌ವರೆಗೆ 10.50 ಕಿ.ಮೀ. ಉದ್ದಕ್ಕೂ ದೀಪಾಲಂಕಾರ ಮಾಡಲಾಗಿದೆ. ಚಪ್ಪರ ಮಾದರಿಯ ಅಲಂಕಾರ, ಆರ್‌ಜಿಬಿ ಟ್ಯೂಬ್‌ಗಳು, ವಾರ್ಮ್ ವೈಟ್ ಹಾಗೂ ಪಿಂಕ್ ಬಣ್ಣದ ಬಲ್ಟ್ ಗಳು ಹೆದ್ದಾರಿಗೆ ಹೊಸ ಮೆರುಗು ನೀಡಿವೆ. ಎರ್ಮಾಳು ಡಿವೈಡರ್ ನಿಂದ ಮೂಳೂರು ಡಿವೈಡರ್ ವರೆಗಿನ ಸುಮಾರು 1.50 ಕಿ.ಮೀ. ವ್ಯಾಪ್ತಿಯಲ್ಲಿ ರೂಫ್ ಸೀಲಿಂಗ್ ಲೈಟ್ಸ್ ಮತ್ತು ಮಿನಿಯೇಚರ್ ಲೈಟ್ ಹಾಕಲಾಗಿದೆ.

ಶೋಭಾಯಾತ್ರೆ ಸಾಗುವ ಬೀಚ್ ರಸ್ತೆಯಲ್ಲೂ ದೀಪಾಲಂಕಾರ ಮಾಡಲಾಗಿದ್ದು ಇಕ್ಕೆಲಗಳ ಮನೆಗಳು ಮತ್ತು ಕಟ್ಟಡಗಳ ಮಾಲಕರೂ ದೀಪಾಲಂಕಾರ ಮೂಲಕ ಶೋಭೆ ಹೆಚ್ಚಿಸಲು ಕೈಜೋಡಿಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *